ಶನಿವಾರ, ಮಾರ್ಚ್ 25, 2023
29 °C
ವೈಎನ್ ಹೊಸಕೋಟೆ ಸರ್ಕಾರಿ ಶಾಲೆ: ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಹರ್ಷ

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈಎನ್ ಹೊಸಕೋಟೆ: ಗ್ರಾಮದಲ್ಲಿ ಶತಮಾನಗಳಿಂದ ಶಿಕ್ಷಣ ಒದಗಿಸುತ್ತಿರುವ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ತರಗತಿಗಳು ಪ್ರಾರಂಭವಾಗುತ್ತಿರುವುದಕ್ಕೆ ಹಳೇ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ದುಬಾರಿ ಶುಲ್ಕ ಕಟ್ಟಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಕೊಡಿಸಲಾಗದ ಪೋಷಕರಿಗೆ ಸರ್ಕಾರದ ಈ ನಿರ್ಧಾರ ವರದಾನವಾಗಲಿದೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಬೇಕು ಎನ್ನುವುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ವರ್ಷ ಈಡೇರುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರಲ್ಲಿ ಓದು, ಆಟೋಟ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರಿದ್ದಾರೆ. ಎಲ್ಲ ಸೌಲಭ್ಯಗಳಿದ್ದರೂ ಇಂಗ್ಲಿಷ್‌ ಮಾಧ್ಯಮದ ಕೊರಗೊಂದು ಇಲ್ಲಿ ಕಾಡುತ್ತಿತ್ತು. ಇಂದು ಆ ಕೊರಗು ನಿವಾರಣೆಯಾಗಿ ಹೆಸರಿಗೆ ತಕ್ಕಂತೆ ಶಾಲೆಯು ಆಧುನಿಕ ಮಾದರಿಯ ಶಾಲೆಯಾಗಲಿದೆ. ಅದಕ್ಕೆ ನಮ್ಮೆಲ್ಲರ ಸಹಕಾರವಿದೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳಾದ ಶ್ರೀನಿವಾಸ, ಶೇಖರ್ ಬಾಬು, ಪರಮೇಶ.

ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೋಧನೆ ಪ್ರಾರಂಭವಾಗುತ್ತಿದೆ. ಕೇವಲ 30 ವಿದ್ಯಾರ್ಥಿಗಳ ದಾಖಲಾತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜುಲೈ 10ರೊಳಗೆ ಆಸಕ್ತ ಪೋಷಕರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುವುದು.

ಕನ್ನಡ ಮಾಧ್ಯಮದ ತರಗತಿಗಳ ದಾಖಲಾತಿಗೆ ಈ ನಿಯಮಗಳು ಅನ್ವಯಿ
ಸುವುದಿಲ್ಲ. ದಾಖಲಾತಿಯ ಸಂಖ್ಯೆಗೆ ಮಿತಿ ಇಲ್ಲ. ಇಂಗ್ಲಿಷ್ ಮಾಧ್ಯಮದ ಉತ್ತಮ ಬೋಧನೆಗೆ ಇಲಾಖೆಯ ಮಾರ್ಗದರ್ಶನದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಶಿಕ್ಷಕರ ಸಹಕಾರ ಮತ್ತು ಸ್ಥಳೀಯರ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗುತ್ತೇವೆ ಎಂದಿದ್ದಾರೆ ಮುಖ್ಯಶಿಕ್ಷಕ ಐ.ಎನ್.ನಾರಾಯಣಪ್ಪ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು