ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ವಿ.ವಿಯಲ್ಲಿ ನವೋದ್ಯಮ ಮಳಿಗೆಗೆ ಚಾಲನೆ

‘ಉದ್ಯಮ ಶೀಲತಾ ಸಪ್ತಾಹ’ ಕಾರ್ಯಕ್ರಮ
Published : 28 ಆಗಸ್ಟ್ 2024, 5:46 IST
Last Updated : 28 ಆಗಸ್ಟ್ 2024, 5:46 IST
ಫಾಲೋ ಮಾಡಿ
Comments

ತುಮಕೂರು: ವಿಶ್ವವಿದ್ಯಾಲಯದಲ್ಲಿ ‘ಉದ್ಯಮಶೀಲತಾ ಸಪ್ತಾಹ’ದ ಅಂಗವಾಗಿ ಏರ್ಪಡಿಸಿರುವ ಮೂರು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ನವೋದ್ಯಮ ಮಳಿಗೆಗಳಿಗೆ ಮಂಗಳವಾರ ಚಾಲನೆ ದೊರೆಯಿತು.

ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಸಪ್ತಾಹ ನಡೆಯುತ್ತಿದೆ. ವಿದ್ಯಾರ್ಥಿಗಳೇ ಸಣ್ಣ ಬಂಡವಾಳದ ಆಹಾರ, ಸಿರಿ ಧಾನ್ಯ, ಫ್ಯಾಷನ್, ಗೃಹ ಅಲಂಕಾರ ಮಳಿಗೆ ಆರಂಭಿಸಿದ್ದಾರೆ. ಆ. 29ರ ವರೆಗೆ ಮಳಿಗೆಗಳು ತೆರೆದಿರುತ್ತವೆ. ಸಾರ್ವಜನಿಕರು ಮಧ್ಯಾಹ್ನ 1 ಗಂಟೆ ನಂತರ ಭೇಟಿ ನೀಡಬಹುದು.

ರಾಜ್‌ ಟೆಕ್ನಾಲಜಿಸ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಹಿರೇಮಠ್ ಮಳಿಗೆ ಉದ್ಘಾಟಿಸಿ ಮಾತನಾಡಿ, ‘ಭಾರತೀಯರನ್ನು ಗುಲಾಮರನ್ನಾಗಿ, ಕೆಲಸಗಾರರನ್ನಾಗಿ ರೂಪಿಸಿದ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆ ಹಿಮ್ಮೆಟ್ಟಿಸಿ, ನಮ್ಮ ಉತ್ಸಾಹಕ್ಕೆ ಪೂರಕವಾದ ಮಾರ್ಗ ಆರಿಸಿ ನಡೆಯುವ ಕಾಲವಿದು. ಉದ್ಯಮ ಆರಂಭಿಸುವವರಿಗೆ ನಮ್ಯತೆ, ಸ್ವಾತಂತ್ರ್ಯ, ಸ್ವಾಯತ್ತತೆ, ಸೃಜನಶೀಲತೆ, ಉತ್ಸಾಹವೇ ಬಂಡವಾಳ’ ಎಂದರು.

ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್‌, ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ನೂರ್ ಅಫ್ಜಾ, ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ.ಮೋಹನ್‌ರಾಮ್‌, ಉಪನ್ಯಾಸಕಿ ಇಂಪಾ, ಚಂದ್ರಮೌಳೇಶ್ವರ ಟ್ರೇಡರ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಕೋದಂಡರಾಮ, ಉದ್ಯಮಿ ಆರ್.ಎಲ್.ರಮೇಶ್‌ಬಾಬು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT