ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

Published 26 ಏಪ್ರಿಲ್ 2024, 14:13 IST
Last Updated 26 ಏಪ್ರಿಲ್ 2024, 14:13 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದು, ಇದರ ವಾಸನೆಯಿಂದಾಗಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.

ದೊಡ್ಡಗೂಳ ಗ್ರಾಮಕ್ಕೆ ಹೊಂದಿಕೊಂಡು ಕೆರೆ ಇದೆ. ಕೆರೆಯಲ್ಲಿ ನೀರು ಕಡಿಮೆಯಾಗಿ ಗುಂಡಿ ಗುದ್ದರಗಳಲ್ಲಿ ನೀರಿವೆ. ಬಿಸಿಲಿನ ಬೇಗೆ ಸಹ ಹೆಚ್ಚಾದ ಕಾರಣ ನಿತ್ಯ ಮೀನುಗಳು ಸತ್ತು ಹೋಗುತ್ತಿವೆ. ಅವರಿಂದ ಬರುವ ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೆರೆಯಲ್ಲಿ ನೀರಿದ್ದ ಸಮಯದಲ್ಲಿ ಮೀನುಗಳನ್ನು ಹರಾಜು ಮಾಡಿ ಲಾಭ ಪಡೆಯುವ ಮೀನುಗಾರಿಕೆ ಇಲಾಖೆ, ಈಗ ಕೆರೆಯಲ್ಲಿ ಮೀನುಗಳು ಸಾಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ದುರ್ವಾಸೆ ಬೀರುತ್ತಿದೆ. ಗ್ರಾಮ ಪಂಚಾಯಿತಿ ಅವರು ನಮಗೂ, ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ, ನಮ್ಮ ನೋವು ಕೇಳುವರು ಯಾರು ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೆರೆಯಲ್ಲಿ ಮೀನುಗಳು ಸತ್ತ ಕಾರಣ ವಾಸನೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸತ್ತ ಮೀನುಗಳನ್ನು ಆಹಾರಕ್ಕಾಗಿ ಕಾಗೆ, ಹದ್ದುಗಳು ಎತ್ತಿಕೊಂಡು ಬಂದು ಮನೆಗಳ‌ ಮೇಲೆ ಹಾಗೂ ಮುಂದೆ ಹಾಕುತ್ತಿದ್ದು ಇದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಸತ್ತಿರುವ ಮೀನುಗಳು
ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಸತ್ತಿರುವ ಮೀನುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT