ತೆಂಗಿನೆಣ್ಣೆ ಘಟಕಕ್ಕೆ ಭೂಮಿಪೂಜೆ

ಕುಣಿಗಲ್: ತೆಂಗು ಉತ್ಪಾದಕರ ಕಂಪನಿಯಿಂದ ವರ್ಜಿನ್ ಕೊಕೊನೆಟ್ ಆಯಿಲ್ ಘಟಕ ಪ್ರಾರಂಭ ಮಾಡುತ್ತಿದ್ದು, ಇದರ ಜೊತೆಗೆ ಇನ್ನಷ್ಟು ಯೋಜನೆಗಳು ರೈತರಿಗೆ ತಲುಪಲಿವೆ ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ನಾರಾಯಣ ಗೌಡ ತಿಳಿಸಿದರು.
ಪಟ್ಟಣದ ಬೇಗೂರು ರಸ್ತೆಯ ಎಚ್‌ಪಿ ಗ್ಯಾಸ್ ಬಳಿ ವರ್ಜಿನ್ ಕೊಕೊನೆಟ್ ಆಯಿಲ್ ಘಟಕದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕುಣಿಗಲ್ ತೆಂಗು ಉತ್ಪಾದಕರ ಕಂಪನಿಯು ರೈತರ ಕಂಪನಿಯಾಗಿದೆ. ಇಲ್ಲಿ ಈಗಾಗಲೇ ರೈತರು ಷೇರು ಹೊಂದಿದ್ದಾರೆ. ತೆಂಗಿನ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರೈತರ ಪ್ರತಿ ತೋಟದಲ್ಲೂ ಜೇನು ಸಾಕಾಣಿಕೆಯನ್ನು ಉಪಕಸುಬಾಗಿ ಅಳವಡಿಸಿಕೊಳ್ಳಲು ಮತ್ತು ತೆಂಗು ಬೆಳೆಯಲ್ಲಿ ಶೇಕಡಾವಾರು ಉತ್ಪಾದನೆ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ರೈತ ಭೈರವೇಶ್ವರ ಫೆಡರೇಷನ್ ಅಧ್ಯಕ್ಷ ಆನಂದ್, ನಿರ್ದೇಶಕರಾದ ಎನ್.ಎಸ್. ವಸಂತ್ ಕುಮಾರ್, ಧನಂಜಯ, ಕಂಪನಿಯ ವ್ಯವಸ್ಥಾಪಕಿ ಮಂಜುಳಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.