ಶನಿವಾರ, ಅಕ್ಟೋಬರ್ 31, 2020
26 °C
ವಿದ್ಯಾರ್ಥಿಗಳ ಮನ ಗೆದ್ದ ಪ್ರಯೋಗ

ಸರ್ಕಾರಿ ಶಾಲೆಯ ಸಂಚಾರಿ ಪ್ರಯೋಗಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಕೋವಿಡ್ ಸೋಂಕಿನ ಭೀತಿಯಿಂದ ಶಾಲೆಯಿಂದ ದೂರ ಉಳಿದ ಮಕ್ಕಳ ಮನೆ ಬಾಗಿಲಿಗೆ ತೆರಳಿ ಸಂಚಾರಿ ಪ್ರಯೋಗಾಲಯ ಸಹಾಯದಿಂದ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಜಿ.ಎಚ್. ರೇಣುಕರಾಜ್ ವಿಜ್ಞಾನ ವಿಷಯ ಬೋಧಿಸುತ್ತಿದ್ದಾರೆ.

ಪ್ರೌಢಶಾಲೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪ್ರಯೋಗಗಳನ್ನು ಸ್ವತಃ ಪ್ರದರ್ಶಿಸಲು ಅವಕಾಶ ಮಾಡಿಕೊಡಲು ಸಂಚಾರಿ ಪ್ರಯೋಗಾಲಯ ಹೆಚ್ಚು ಸಹಕಾರಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಕಿಟ್ ಕೊಂಡೊಯ್ಯಬಹುದಾಗಿದೆ.

ನಿತ್ಯ ಸಂಜೆಯ ವೇಳೆ ವಿಜ್ಞಾನ ವಿಷಯದ ಆನ್‌ಲೈನ್ ತರಗತಿಗಳನ್ನು ಸತತ 4 ಗಂಟೆಗಳ ತೆಗೆದುಕೊಂಡು ಮಕ್ಕಳ ಸಂಶಯ ಬಗೆಹರಿಸುತ್ತಿರುವುದು ಶಾಲೆಯ ಪೋಷಕರಲ್ಲಿ ಸಂತಸ ಮೂಡಿಸಿದೆ.

ಅರಸೀಕೆರೆ ಶಾಲೆಗೆ ಆನ್‌ಲೈನ್ ತರಗತಿ ಸೀಮಿತವಾಗಿರದೆ ರಾಜ್ಯದ ಇತರೆ ಶಾಲೆಯ ವಿದ್ಯಾರ್ಥಿಗಳಿಗೂ ತರಗತಿ ನಡೆಸುತಿದ್ದಾರೆ.

ಆಸಕ್ತ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌, ಗೂಗಲ್ ಮೀಟ್ ಲಿಂಕ್ ಕಳುಹಿಸುತ್ತಾರೆ. ವಿಜ್ಞಾನದ ವಿಡಿಯೊ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು