ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಎಚ್.ಸಿ.ಎಂ.ಜಿ ಪದವಿಪೂರ್ವ ಕಾಲೇಜಿನ 1999-2000ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಕೆ.ಜಿ.ಸೋಮಶೇಖರಯ್ಯ, ಜಿ.ಬಸವರಾಜಪ್ಪ, ಆರ್.ರುದ್ರಪ್ಪ, ವತ್ಸಲಾ, ಉಷಾಕುಮಾರಿ, ಅನಸೂಯ, ಗಂಗೂಬಾಯಿ, ಚಂದ್ರಕಲಾ, ಭಾನುಮತಿ ನಾಗಮಣಿ, ಇಂದಿರಾ, ಶ್ರೀಕಾಂತ್, ವೀರಭದ್ರಪ್ಪ, ಧನಂಜಯ್ಯ, ವಿಶ್ವನಾಥಯ್ಯ, ಆನಂದ್, ಗಂಗಣ್ಣ ಅವರಿಗೆ ಗುರುನಮನ ಸಲ್ಲಿಸಲಾಯಿತು.

ನಿವೃತ್ತ ಶಿಕ್ಷಕ ಆರ್.ರುದ್ರಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಕೇವಲ ಅಕ್ಷರ ಕಲಿಸುವ ಕೆಲಸವಾಗಿರದೆ, ಸಮಾಜಕ್ಕೆ ಭವಿಷ್ಯದ ಪೀಳಿಗೆ ತಯಾರು ಮಾಡುವ ಆತ್ಮಸಂತೃಪ್ತಿಯ ಗುರುತರ ಜವಾಬ್ದಾರಿ. ಅಮೂರ್ತವಾದ ಶಿಷ್ಯರ ಜೀವನವನ್ನು ತಿದ್ದಿ ಮೂರ್ತಿ ರೂಪಕ್ಕೆ ತಂದಾಗ, ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕಿ ಉಷಾ ಕುಮಾರಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಹೆಮ್ಮೆಯ ವೃತ್ತಿ. ವಿದ್ಯಾರ್ಥಿಗಳಿಗೆ ನಾವು ತೋರುವ ಪ್ರೀತಿ ವಿಶ್ವಾಸ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚು ಸಧೃಡಗೊಳಿಸುವ ಜೊತೆಗೆ, ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಗುತ್ತದೆ ಎಂದರು.

ನಿವೃತ್ತ ಶಿಕ್ಷಕ ಜಿ.ಬಸವರಾಜಪ್ಪ ಮಾತನಾಡಿ, ಗುರುಶಿಷ್ಯರ ಬಂಧನ ಬೆಲೆಕಟ್ಟಲಾಗದ್ದು ಎಂದರು.

1999-2000ನೇ ಸಾಲಿನ ವಿದ್ಯಾರ್ಥಿಗಳಾದ ಮಂಜುನಾಥ್ ಎಚ್.ಕೆ., ಎಸ್.ಕೆ.ಮಂಜುಳ, ಗಂಗಾಲೀಲಾ, ವೀಣಾ, ಆಶಾ, ಕೆ.ಜೆ.ಹರೀಶ್, ಚೇತನ್, ಬಸವರಾಜು, ಪ್ರಭಾಕರ, ಧನಂಜಯ, ಸವಿತಾ, ಸೇರಿದಂತೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.