ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಂದನಾ; ನೆನಪುಗಳ ಮೆಲುಕು

ವಿಜ್ಞಾನ ವಿಭಾಗ ಗೆಳೆಯರ ಬಳಗ ಆಯೋಜನೆ
Last Updated 25 ಜನವರಿ 2021, 1:06 IST
ಅಕ್ಷರ ಗಾತ್ರ

ಮಧುಗಿರಿ: ಗುರು ಶಿಷ್ಯರ ಸಂಬಂಧ ಬದುಕಿನಲ್ಲಿ ಅತ್ಯಂತ ಆರ್ಥಪೂರ್ಣವಾಗಿ ಉಳಿಯುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪಿ.ಎಂ. ಸೋಮ್ಲಾನಾಯ್ಕ್ ತಿಳಿಸಿದರು.

ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1985-87ನೇ ಸಾಲಿನ ವಿಜ್ಞಾನ ವಿಭಾಗ ಗೆಳೆಯರ ಬಳಗ ಅಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‌

ಹಳೆಯ ನೆನಪುಗಳನ್ನು ಮೆಲುಕು ಹಾಕುವುದೇ ಬದುಕಿಗೆ ಹೊಸ ಉತ್ಸಾಹ ನೀಡುತ್ತದೆ ಎಂದರು.

ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ಅತ್ಯಂತ ಅಮೂಲ್ಯವಾಗಿದ್ದು, ಈ ದಿಸೆಯಲ್ಲಿ ಅತ್ಮೀಯತೆಯಿಂದ ಬೋಧನೆ ಮಾಡಿದ ಉಪನ್ಯಾಸಕರನ್ನು ಸ್ನೇಹಿತರ ಜೊತೆಗೂಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ಉಪನ್ಯಾಸಕರಾದ ಎಂ.ಸಿ ಶಿವಾನಂದ, ಯು.ಡಿ. ಲಕ್ಷ್ಮಿನಾರಾಯಣ್, ಟಿ.ಶರಣಪ್ಪ, ಮಹಾಲಿಂಗಯ್ಯ, ಸೀತಾ
ಲಕ್ಷ್ಮಿ, ರಾಜೇಶ್ವರಿ, ಸಿದ್ದಗಂಗಯ್ಯವಿದ್ಯಾರ್ಥಿಗಳಾದ ಸಿ.ಕೆ ಪುರುಷೋತ್ತಮ್, ಮಂಜುನಾಥ್, ವಿಶ್ವನಾಥ್, ಕೆ.ಸಿ ವೆಂಕಟೇಶ್, ಸಂಜಯ್, ಜಿ.ಆರ್. ವೆಂಕಟೇಶ್, ಸೋಮಶೇಖರ್, ವಂದನಾ, ತಾರಾ, ಸುಧಾ, ಹೇಮಲತಾ, ವನಜ, ಶೋಭದೇವಿ, ದಾಕ್ಷಾಯಿಣಿ, ಧನಪಾಲ್, ವೀರಭದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT