ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖುಷಿ ಪಟ್ಟು ಬರೆದು ಬಿಡಿ...

ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬಿದ ಪಾವಟೆ
Published 7 ಮಾರ್ಚ್ 2024, 5:16 IST
Last Updated 7 ಮಾರ್ಚ್ 2024, 5:16 IST
ಅಕ್ಷರ ಗಾತ್ರ

ತುಮಕೂರು: ‘ಪರೀಕ್ಷಾ ಕೇಂದ್ರದಲ್ಲಿ ಗಾಬರಿಯಾಗದೆ, ನನಗೆ ಎಲ್ಲ ಉತ್ತರ ಗೊತ್ತು ಎಂಬಂತೆ ಮನಸ್ಸಿಟ್ಟು, ಖುಷಿ ಪಟ್ಟು, ನಗುತ್ತಾ ಪರೀಕ್ಷೆ ಬರೆದು ಬಿಡಿ’ ಎಂದು ಸಂಪನ್ಮೂಲ ವ್ಯಕ್ತಿ ಸಿ.ಸಿ.ಪಾವಟೆ ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬಿದರು.

ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ‘ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಮಕ್ಕಳಲ್ಲಿ ಪೋಷಕರು ನಕಾರಾತ್ಮಕ ಅಂಶಗಳನ್ನು ತುಂಬುತ್ತಾರೆ. ಬಡತನದಿಂದ ಹೊರ ಬರಲು ಜ್ಞಾನ ಸಂಪಾದನೆಯೊಂದೇ ನಮಗಿರುವ ದಾರಿ. ಮಕ್ಕಳಲ್ಲಿ ಆತ್ಮವಿಶ್ವಾಸ ಬಿತ್ತುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಪ್ರಮುಖ ಸಲಹೆಗಳು

* ಪರೀಕ್ಷೆಗೆ ಹೋಗುವಾಗ ಟೀ, ಕಾಫಿ ಕುಡಿಯಬಾರದು

* ಪರೀಕ್ಷೆಗೆ ಹೋಗಿ– ಬರಲು‌ ಶಕ್ತಿಗೆ ಬೇಕಾಗುವಷ್ಟು ಆಹಾರ ಸೇವಿಸಬೇಕು

* ಪರೀಕ್ಷೆಯ ದಿನ ಪರೀಕ್ಷಾ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಮಾಡಬಾರದು

* ಮನೆಯಲ್ಲಿ ಟಿ.ವಿ, ಮೊಬೈಲ್‌ ನೋಡುವುದು ಬಿಡಬೇಕು

* ಕೊನೆಯ ಕ್ಷಣದವರೆಗೂ ಪರೀಕ್ಷಾ ಕೇಂದ್ರದಲ್ಲಿ ಇರಬೇಕು

* ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು

* ಮನೆಯಿಂದ ಹೊರಗಡೆ ತಿಂಡಿ, ಮಸಾಲೆ ಪದಾರ್ಥ ತಿನ್ನಬಾರದು

* ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT