ಬುಧವಾರ, ಜುಲೈ 28, 2021
21 °C

ಗುಬ್ಬಿ: ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಚುಚ್ಚಿ ಕೊಲೆಗೈದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗುಬ್ಬಿ: ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಚಾಕುವಿನಿಂದ ಮನಬಂದಂತೆ ಚುಚ್ಚಿ ಸಾಯಿಸಿ, ಕೊನೆಗೆ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಇಂದು(ಬುಧವಾರ) ಮುಂಜಾನೆ ನಡೆದಿದೆ.

ಗುಬ್ಬಿ ಪಟ್ಟಣದ ಮಗ್ಗದವರ ಬೀದಿಯ ಶಾಂತಾನಂದಾಶ್ರಮ ರಸ್ತೆಯ ವಾಸಿ ನಾಗರಾಜು(26) ಕೊಲೆಗೈದ ವ್ಯಕ್ತಿ. ಈತನಿಗೆ ನಿಟ್ಟೂರು ಹೋಬಳಿ ತಳವಾರಹಳ್ಳಿಯ ದಿವ್ಯಾ(23) ಎಂಬುವವರೊಂದಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆ ಮಾಡಿಕೊಡಲಾಗಿತ್ತು.

ಬುಧವಾರ ಬೆಳಗಿನ ಜಾವ 5.30 ರ ಹೊತ್ತಿಗೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, 6.30 ರ ಹೊತ್ತಿಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ದೇಹಕ್ಕೆ ಮನಬಂದಂತೆ ಚುಚ್ಚಿ ಸಾಯಿಸಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಪತ್ನಿ ಮನೆಯಲ್ಲೇ ಸಾವನ್ನಪಿದ್ದಾರೆ.

ಕೊಲೆಗೈದ ವ್ಯಕ್ತಿ ಠಾಣೆಯಲ್ಲಿ ಈ ಮೊದಲೇ ಹುಡುಗಿಗೆ ಮದುವೆಯಾಗಿತ್ತು ನನಗೆ ಮರೆಮಾಚಿ ಮದುವೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು