ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಕ್ಕೆ ಈಡಿಗ ಸಮುದಾಯದ ಸಮಾವೇಶ

Published 7 ಡಿಸೆಂಬರ್ 2023, 3:05 IST
Last Updated 7 ಡಿಸೆಂಬರ್ 2023, 3:05 IST
ಅಕ್ಷರ ಗಾತ್ರ

ತುರುವೇಕೆರೆ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಿಂದ ಡಿಸೆಂಬರ್‌ 10ರಂದು ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಉಪ ಪಂಗಡಗಳ ಬೃಹತ್ ಜಾಗೃತಿ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ನಿಟ್ಟೂರು ರೇಣುಕಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದ ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯ ಪಡೆಯುವುದು ಇದರ ಉದ್ದೇಶ ಎಂದರು.

ಈಡಿಗ ಸಮುದಾಯದ ಜನರು ಇಡೀ ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿದ್ದು, ವಿವಿಧ ಹೆಸರುಗಳಿಂದ ಗುರ್ತಿಸಿಕೊಂಡಿದ್ದಾರೆ. ಅವುಗಳಲ್ಲಿ 26 ಉಪ ಪಂಗಡಗಳಿದ್ದು ಇವೆಲ್ಲವನ್ನು ಒಂದೇ ವೇದಿಕೆಗೆ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ರಾಜ್ಯದ ಮೂಲೆ, ಮೂಲೆಗಳಿಂದಲೂ ಸಮುದಾಯದ ಜನ ಬರುತ್ತಿದ್ದು, ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎಲ್.ಎನ್ ರಾಜಣ್ಣ ಮಾತನಾಡಿ, ‘ಸಮುದಾಯದ ಜನರು ತಾಲ್ಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ತೆರಳಲು ಬಸ್‌ ಸೌಕರ್ಯ ಒದಗಿಸಲಾಗಿದೆ’ ಎಂದರು.

ಶಿವಗಿರಿ ಸತ್ಯಾನಂದತೀರ್ಥ ಸ್ವಾಮೀಜಿ, ಜಿಲ್ಲಾ ಘಟಕದ ಧ್ಯಕ್ಷ ಅಂಬರೀಶ್, ಮುಖಂಡರಾದ ತಿಮ್ಮೇಗೌಡ, ಪ್ರಕಾಶ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗೋಪಾಲ್, ಖಜಾಂಚಿ ಮಂಜುನಾಥ್, ಮಾಯಸಂದ್ರ, ಎಂ.ವಿ.ಕುಮಾರ್, ನಾಗೇಶ್, ಮೇಲನಹಳ್ಳಿ ರಾಜಣ್ಣ, ಬುಗುಡನಹಳ್ಳಿ ಗಂಗರಾಜು, ಕೊಪ್ಪ ಗಂಗಣ್ಣ, ಕುಪ್ಪೂರು ಕುಮಾರ್, ಅನಿಲ್, ಶ್ರೀನಿವಾಸ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT