ತುಮಕೂರು: ಯುವ ಪೀಳಿಗೆಯ ಮೌಲ್ಯರಹಿತ ಬದುಕು, ಕುಸಿದಿರುವ ವ್ಯಕ್ತಿತ್ವ, ದುರ್ನಡತೆಯಿಂದ ಸ್ವಾತಂತ್ರ್ಯ ಕಳೆದುಕೊಳ್ಳುವ ಪರಿಸ್ಥಿತಿಗೆ ದೇಶ ತಲುಪಬಹುದು ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸ್ ಆತಂಕ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಿನ ಯುವ ಸಮೂಹಕ್ಕೆ ಸನ್ನಡತೆ ಇಲ್ಲ. ಸಾಮೂಹಿಕ ಅತ್ಯಾಚಾರ, ಕೊಲೆ, ಸುಲಿಗೆಯಂತಹ ವಿಕೃತ ಕೆಲಸಗಳಲ್ಲಿ ಯುವಕರು ತೊಡಗಿಸಿಕೊಳ್ಳುತ್ತಿದ್ದಾರೆ. ಮೊಬೈಲ್ ವ್ಯಸನಿಗಳಾಗಿ ನೈತಿಕವಾಗಿ ಕುಸಿಯುತ್ತಿದ್ದಾರೆ. ಇದರ ಪರಿಣಾಮ ಭಾರತವು ವಿಕಾಸವಾದದಲ್ಲಿ ನೆಲಕಚ್ಚಿ, ಸ್ವಾತಂತ್ರ್ಯದ ಅಧಃಪತನವಾಗುತ್ತಿದೆ. ಯುವಕರಿಗೆ ಸ್ವಾತಂತ್ರ್ಯದ ಅರಿವು, ಜವಾಬ್ದಾರಿ ಬಾರದಿರುವುದು ವಿಪರ್ಯಾಸ ಎಂದರು.

ಸ್ವಾತಂತ್ರ್ಯವೆಂದರೆ ಮೌಢ್ಯಗಳಿಂದ, ಧರ್ಮ-ಜಾತಿಗಳ ಬಂಧನದಿಂದ, ಅನಕ್ಷರತೆಯಿಂದ, ಅಸಮಾನತೆಯಿಂದ, ಮೇಲು-ಕೀಳು ಭಾವನೆಯಿಂದ, ನಗರ- ಗ್ರಾಮಗಳ ತಾರತಮ್ಯದಿಂದ ಸ್ವತಂತ್ರರಾಗುವುದು. ಚುನಾವಣೆಯಲ್ಲಿ ಹಣ-ಹೆಂಡಕ್ಕೆ ಮತ ಮಾರಿಕೊಳ್ಳದೆ ಉತ್ತಮರನ್ನು ಆಯ್ಕೆ ಮಾಡುವುದಾಗಿದೆ ಎಂದು ಹೇಳಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್, ಪ್ರೊ.ಕೆ.ಪ್ರಸನ್ನಕುಮಾರ್, ಸಹ ಪ್ರಾಧ್ಯಾಪಕಿ ಗೀತಾ ವಸಂತ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಎ.ಎಂ.ಮಂಜುನಾಥ, ನಿವೃತ್ತ ಯೋಧ ಎಂ.ಈರಣ್ಣ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.