ತಿಪಟೂರು: ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಎರಡು ದಿನದ ಹಲಸಿನ ಹಬ್ಬದಲ್ಲಿ ವಿವಿಧ ಬಗೆ ಹಲಸಿನ ಖಾದ್ಯ ಜನರ ಬಾಯಿಯಲ್ಲಿ ನೀರೂರಿಸಿತು.

ಹಬ್ಬದಲ್ಲಿ ಹಣ್ಣು ತಿನ್ನುವ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ ಹಲಸಿನ ಪ್ರಿಯರ ಮನಗೆದ್ದಿತು. ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಹೇಮಾಮೃತ ಪ್ರಥಮ, ನಿಶಾ.ಯು.ಬಿ, ದ್ವಿತೀಯ, ಗಗನ ತೃತೀಯ, ಚಾರ್ವಿ ಸಮಾಧಾನಕರ ಬಹುಮಾನ ಪಡೆದರು.

ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ 1ರಿಂದ 5ನೇ ತರಗತಿ ವಿಭಾಗದಲ್ಲಿ ಸ್ಟೆಲ್ಲಾ ಮೆರೀಸ್ ಶಾಲೆ ತನುಷ್, ನವಮಿ, ದೀಪ ಕೆ.ಜಿ, 6ರಿಂದ 10ನೇ ತರಗತಿ ವಿಭಾಗದಲ್ಲಿ ಸ್ಟೆಲ್ಲಾ ಮೆರೀಸ್ ಶಾಲೆ ಚಿಂತನ್ ಎನ್.ಆರ್, ಪಿಎಮ್ಶ್ರೀ ನೊಣವಿನಕೆರೆ ಶಾಲೆ ತೇಜಸ್ವಿನಿ.ಕೆ, ಜಿಜಿಜೆಸಿ ಶಾಲೆ ಮಯೂರಿ ಉತ್ತಮವಾಗಿ ಹಲಸಿನ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದರು.

ಹಲಸಿನ ಖಾದ್ಯರುಚಿ ನೋಡುವ ಸ್ಪರ್ಧೆಯಲ್ಲಿ ಸಾಕ್ಷಿ ಪ್ರಸಾದ್ ಪ್ರಥಮ, ಮೋನ ದ್ವಿತೀಯ, ಮಂಜುಳಾ ಕೃಷ್ಣಮೂರ್ತಿ ತೃತೀಯ ಸ್ಥಾನ ಪಡೆದರು. ಹಣ್ಣು ತಿನ್ನುವ ಸ್ಪರ್ಧೆ– ಪುರುಷರ ವಿಭಾಗ: ದಿನೇಶ್ ಪ್ರಥಮ, ದಯಾನಂದಸ್ವಾಮಿ ದ್ವಿತೀಯ, ಬಜಗೂರು, ಚಂದ್ರಶೇಖರ್ ದೊಡ್ಡಮಾರ್ಪನಹಳ್ಳಿ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗ: ತೇಜಸ್ವಿನಿ ಪ್ರಥಮ, ಸುಷ್ಮಾ ದ್ವಿತೀಯ, ಮಧುಶ್ರೀ ತೃತೀಯ, ಸೌಮ್ಯ ಸಮಾಧಾನಕರ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಮೋಹಿತ್.ಎಸ್.ವೈ ಪ್ರಥಮ, ಫರಾನ್ಖಾನ್ ದ್ವಿತೀಯ, ಉದಯ್ ತೃತೀಯ, ನಿಖಿಲ್ ಸಮಾಧಾನಕರ ಸ್ಥಾನ ಪಡೆದರು.

ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಬಯಲು ಸೀಮೆ ಹಲಸಿನ ಹರಿಕಾರ ಪದ್ಮರಾಜ್, ಡಾ.ವಿವೇಚನ್, ಮಾಜಿ ಶಾಸಕ ಬಿ.ನಂಜಾಮರಿ, ಕೆ.ವಿ.ಕೆ ಗೋವಿಂದೇಗೌಡ, ಸರ್ಕಲ್ ಇನ್ ಸ್ಪೆಕ್ಟರ್ ಸಿದ್ದರಾಮೇಶ್ವರ, ಸಹಕಾರ ಇಲಾಖೆ ಬಸವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಆಯೋಜಕರಾದ ಸೊಗಡು ಜನಪದ ಸಂಸ್ಥೆ ಕಾರ್ಯದರ್ಶಿ ಚಿದಾನಂದ್, ನಿರ್ದೇಶಕರಾದ ನಿಜಗುಣ, ಕಿರಣ್, ಮುತ್ತಣ್ಣ ಜೇಮ್ಸ್ ಫೌಂಡಷೇನ್ ಕಾರ್ಯದರ್ಶಿ ತರಕಾರಿ ಗಂಗಾಧರ್, ಶಿಕ್ಷಕ ಸುರೇಶ್ ನೊಣವಿನಕೆರೆ, ಪುಟ್ಟಸ್ವಾಮಿ, ಮಂಜುಳಾ ತಿಮ್ಮೇಗೌಡ, ಅಕ್ಕಮಹಾದೇವಿ ಸಂಘದ ಪ್ರಭಾಮಣಿ, ಸುಧಾಕರ್, ಆರ್ಥಿಕ ಸಮಾಲೋಚಕ ರೇಖಾ ದಯಾನಂದ್ ಮಾದಿಹಳ್ಳಿ, ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ಸ್ವರ್ಧೆಗಳಲ್ಲಿ ವಿಜೇತರಿಗೆ ಹಲಸಿನ ಸಸಿ ಹಾಗೂ ಪ್ರಮಾಣ ಪತ್ರ ವಿತರಿಸಿಲಾಯಿತು. ತಿಪಟೂರಿನ ವಿಶೇಷವಾದ ಗಂಗಾಪಾನಿ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಹಲಸಿನಲ್ಲಿ ಹಲವು ರೋಗನಿರೋಧಕ ಶಕ್ತಿ ಆಡಗಿದ್ದು ನಾರಿನ ಅಂಶ ಹೆಚ್ಚಾಗಿದೆ

-ವಿವೇಚನ್ ಶ್ರೀರಂಗ ಆಸ್ವತ್ರೆ

ಮುಂದಿನ ದಿನಗಳಲ್ಲಿ ಗ್ರಾಮೀಣ ಹಾಗೂ ದೇಸಿ ವಿಷಯಾಧಾರಿತ ಕಾರ್ಯಕ್ರಮ ಆಯೋಜಿಸಲಾಗುವುದು

-ಸಿರಿಗಂಧ ಗುರು ಅಧ್ಯಕ್ಷ ಸೊಗಡು ಜನಪದ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.