ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌ | ಜೈನ ಬಸದಿಯ ಪಂಚಕಲ್ಯಾಣ ಮಹೋತ್ಸವ

Published 29 ಏಪ್ರಿಲ್ 2024, 4:40 IST
Last Updated 29 ಏಪ್ರಿಲ್ 2024, 4:40 IST
ಅಕ್ಷರ ಗಾತ್ರ

ಕುಣಿಗಲ್: ಜೈನ ಧರ್ಮವು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಜೀವನದ ಮೌಲ್ಯಗಳ ಸಂಹಿತೆಯ ಪಥದರ್ಶಿಯಾಗಿ ಶಾಶ್ವತಸ್ಥಾನ ಪಡೆದಿದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ನೂತನ ಶಿಲಾಮಯ ಪಾರ್ಶ್ವನಾಥ ತೀರ್ಥಂಕರ ಜೈನ ಬಸದಿಯ ಪಂಚಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಜೈನ ಧರ್ಮೀಯರು ಯಜ್ಞ, ಯಾಗಾದಿಗಳಲ್ಲಿ ಪಶುಗಳನ್ನು ಅಗ್ನಿಗೆ ಸಮರ್ಪಿಸುವುದನ್ನು ತಡೆದರೆ ಹೊರತು ಯಜ್ಞ, ಹೋಮ ಮಾಡುವುದನ್ನು ತಡೆಯಲ್ಲಿಲ್ಲ. ಸಮಾಜದಲ್ಲಿ ಕೌರ್ಯ, ಅಹಿಂಸೆ, ಮಾತ್ಸರ್ಯ ಮತ್ತು ಅಸಮಾನತೆಗಳನ್ನು ತಡೆದು ವಿಶ್ವ ಕುಟುಂಬದ ಪರಿಕಲ್ಪನೆಗೆ ಶ್ರಮಿಸಿದೆ. ದೇಶದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೈನಧರ್ಮೀಯರ ಸಾಧನೆಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಿಟರ್ ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷ ಲಕ್ಷ್ಮೀಸೇನ ಭಟ್ಟರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜೈನ ಸಮಾಜದ ಮಾಜಿ ಅಧ್ಯಕ್ಷ ಬಿ.ಎಲ್. ಮಾಣಿಕ್ಯ ರಾಜಯ್ಯ, ಮೇಘರಾಜ್, ಪಂಚಕಲ್ಯಾಣ ಮಹೋತ್ಸವದ ಗೌರವಾಧ್ಯಕ್ಷ ಡಾ.ವಸಂತಕುಮಾರಯ್ಯ, ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಸಂತೋಷ್ ಜೈನ್, ಮದನ್ ಕುಮಾರ್, ಎಂ.ಡಿ. ಮೋಹನ್ ಕುಮಾರ್, ಜ್ವಾಲೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT