ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಪರಂಪರೆ ಮೆರೆದ ಕನಕದಾಸರು

ಜಿಲ್ಲೆಯ ವಿವಿಧೆಡೆ ಸರಳ, ಅರ್ಥಪೂರ್ಣ ಕನಕದಾಸ ಜಯಂತಿ ಆಚರಣೆ
Last Updated 4 ಡಿಸೆಂಬರ್ 2020, 7:01 IST
ಅಕ್ಷರ ಗಾತ್ರ

ತುಮಕೂರು: ಕನಕದಾಸರು ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಕೊಡುಗೆ ನೀಡಿದ್ದಾರೆ. ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ನಾಡಿನ ಸಾಂಸ್ಕೃತಿಕ ಪರಂಪರೆ ಮೆರೆದಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಅಭಿಪ್ರಾಯಪಟ್ಟರು.

ಜೆಡಿಎಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ವರ್ಣಾಶ್ರಮದ ವಿರುದ್ಧ, ಭಕ್ತಿ ಮಾರ್ಗದ ಮೂಲಕ ಧ್ವನಿ ಎತ್ತಿದರು. ಸಮಾನ ಸಮಾಜಕ್ಕಾಗಿ ಸಾಹಿತ್ಯದ ಮೂಲಕವೇ ಹೋರಾಡಿದ ದಾಸಶ್ರೇಷ್ಠರು. ಕನ್ನಡ ಸಾಹಿತ್ಯ, ಸಂಗೀತ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಸಮಸಮಾಜ ನಿರ್ಮಾಣಕ್ಕೆ ಕೀರ್ತನೆಗಳ ಮೂಲಕವೇ ಕನಕದಾಸರು ಅರಿವು ಮೂಡಿಸಿದರು’ ಎಂದರು.

ಮಹಾನಗರಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಎಚ್.ಡಿ.ಕೆ.ಮಂಜುನಾಥ್, ಜೆಡಿಎಸ್ ಮುಖಂಡರಾದ ಗಂಗಣ್ಣ, ಆರ್.ದೇವರಾಜು, ಕೃಷ್ಣಮೂರ್ತಿ, ತಾಹೆರಾ ಕುಲ್ಸುಮ್, ಪ್ರಸನ್ನ, ಜಯಶ್ರೀ, ಎಂ.ಎನ್.ಚಲುವರಾಜು, ಗೊಲ್ಲಹಳ್ಳಿ ಬಾಲಕೃಷ್ಣ, ಬೈರೇಶ್ ದಿಬ್ಬೂರು, ಮಧು, ಆಶಾ ವಿಜಿಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT