ಕೊಡಿಗೇನಹಳ್ಳಿ: ಕನಕದಾಸರು ಕಾಯಕ ಮತ್ತು ಅಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು ಎಂದು ಚೈತನ್ಯ ಸಿಂಚನ ಸಾಮಾಜಿಕ ಮತ್ತು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಸಿ.ವಿ. ಕುಮಾರ್ ಹೇಳಿದರು.

ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲ್ಲೂಕು ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮನುಜಕುಲಂ ತಾನೊಂದೇ ವಲಂ ಎನ್ನುವ ಹಾಗೆ ಕುಲದ ನೆಲೆಯನ್ನು ಪ್ರಶ್ನಿಸಿದವರು. ದೀನ ದಮನಿತರಿಗೆ ಅನ್ನ, ಆಶ್ರಯ, ಅಕ್ಷರ ಜ್ಞಾನವನ್ನು ಕಲ್ಪಿಸುವವನು ನಿಜವಾದ ಸಾಮಾಜಿಕ ಸ್ನೇಹಿ ವ್ಯಕ್ತಿಯಾಗಿ ಉಳಿಯುತ್ತಾನೆ ಎಂದರು.

ಸಿ.ವಿ ಕುಮಾರ್ ಅವರನ್ನು ಸರ್ಕಾರಿ ಶಾಲಾ ಶಿಕ್ಷಕರು ಸನ್ಮಾನಿಸಿದರು. ಸಿಆರ್ಪಿ ಮಂಜುನಾಥ, ಹನುಮಯ್ಯ, ಎಂ.ಎಸ್ ನರಸಿಂಹಮೂರ್ತಿ, ಮನೋಹರ್, ಕರಿಯಣ್ಣ, ಲಕ್ಷ್ಮಿ, ದೇವರಾಜಮ್ಮ, ಇಮ್ರಾನ್, ಶಾಂತಲಕ್ಷ್ಮಿ, ಸಿ.ಒ. ಶಾಂತಕುಮಾರ್, ನರೇಂದ್ರಕುಮಾರ್, ನಾಗರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.