ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾದ ಕೋಟೆಯಲ್ಲಿ ಹಾರಿದ ಕಮಲ ಧ್ವಜ

Last Updated 10 ನವೆಂಬರ್ 2020, 10:03 IST
ಅಕ್ಷರ ಗಾತ್ರ
ADVERTISEMENT
""
""

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಕಮಲದ ಬಾವುಟ ಹಾರಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 24,600 ಮತಗಳನ್ನು ಪಡೆದಿತ್ತು. ಇದೇ ಆ ಪಕ್ಷ ಗಳಿಸಿದ ಗರಿಷ್ಠ ಮತ. 2018ರ ಚುನಾವಣೆಯಲ್ಲಿ 16 ಸಾವಿರ ಮತಗಳನ್ನು ಪಡೆದಿತ್ತು.

ಜೆಡಿಎಸ್ ಮತ್ತು ಕಾಂಗ್ರೆಸ್ ಇಲ್ಲಿ ಪರಂಪರಾಗತ ಎದುರಾಳಿಗಳಾಗಿದ್ದವು. ಉಪಚುನಾವಣೆ ಆರಂಭದಲ್ಲಿಯೇ ಬಿಜೆಪಿ ಕ್ಷೇತ್ರದ ಮೇಲೆ ತೀವ್ರ ಗಮನವಿರಿಸಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು. ಅಧಿಕಾರ ಮತ್ತು ಸಂಪನ್ಮೂಲವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡು ಗೆಲುವಿನ ದಡ ಸೇರಿದೆ.

ಶಿರಾದ ಮದಲೂರು ಕೆರೆಗೆ ನೀರು ಹರಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದು ಆ ಪಕ್ಷ ಆ ಭಾಗದಲ್ಲಿ ಹೆಚ್ಚು ಮತ ಸೆಳೆಯಲು ಕಾರಣವಾಯಿತು. ಸಣ್ಣ ಪುಟ್ಟ ಜಾತಿಗಳ ಸಭೆ ನಡೆಸಿದ ಬಿಜೆಪಿ ಆ ಪಕ್ಷಕ್ಕೆ ಮತಗಳನ್ನು ಖಾತ್ರಿ ಮಾಡಿಕೊಂಡಿತು. ಜಾತಿವಾರು ಸಭೆಗಳಿಗೆ ಆದ್ಯತೆ ನೀಡಿತು.

ಮದ್ದಕನಹಳ್ಳಿಯಲ್ಲಿ ಕಲ್ಲುಗಣಿಗಾರಿಕೆ ಬಂಡೆ ವಿಚಾರದಲ್ಲಿ ಜಯಚಂದ್ರ ಅವರು ನಡೆದುಕೊಂಡ ರೀತಿ ಭೋವಿ ಸಮುದಾಯದ ಮತಗಳು ಬಿಜೆಪಿಯತ್ತ ತಿರುಗಿದವು. ಪರಿಶಿಷ್ಟರ ಎಡಗೈ ಮತಗಳನ್ನು ಬಿಜೆಪಿ ಒಟ್ಟುಗೂಡಿಸಿತು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿಯ ನಿರೀಕ್ಷೆಗಳನ್ಬಹ ಬಿಜೆಪಿ ಹೆಚ್ಚು ಮೂಡಿಸಿತು. ಪ್ರಮುಖವಾಗಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ‌ ಆ ಸಮುದಾಯವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ರೀತಿಯಲ್ಲಿ ತನ್ನ ಪಾಲಿಗೆ ಬಂದ ಎಲ್ಲ ಅವಕಾಶಗಳನ್ನು ಸಮರ್ಥವಾಗಿ ಬಿಜೆಪಿ ಬಳಸಿಕೊಂಡು ಗೆಲುವಿನ ನಗೆ ಬೀರಿದೆ.

ಬಿಜೆಪಿ ಗೆಲುವಿಗೆ ಕಾರಣಗಳು

* ಯಾದವರ ಬಲ: ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ‌ ಬಿಜೆಪಿ ಆ ಸಮಯದಾಯದ ಮನ ಗೆದ್ದಿತು. ಅನ್ಯ ಪಕ್ಷಗಳಲ್ಲಿ ಇದ್ದ ಗೊಲ್ಲ ಸಮಯದಾಯ ನಾಯಕರನ್ನು ಬಿಜೆಪಿ ಸೆಳೆಯಿತು. ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಸಮುದಾಯದ ಮರ ಪಡೆಯಲು ಕಾರಣರಾದರು.

* ಬಿಜೆಪಿ ಸಂಪನ್ಮೂಲವನ್ನು ಮತ್ತು ಅಧಿಕಾವನ್ನು ಗೆಲುವಿಗೆ ಸಮರ್ಥವಾಗಿ ಬಳಸಿಕೊಂಡಿತು.

* ಕಾಂಗ್ರೆಸ್ ನ ಅಹಿಂದ ಮತಗಳನ್ನು ಬಿಜೆಪಿ ವಿಭಜಿಸಿತು.

* ಮದ್ದಕ್ಕನಹಳ್ಳಿಯ ಕಲ್ಲುಗಣಿಗಾರಿಕೆ ವಿವಾದ ಪರಿಹರಿಸುವ ಭರವಸೆ ಮುಖ್ಯಮಂತ್ರಿ ಅವರಿಂದ ದೊರೆತ ಕಾರಣ ಭೋವಿ ಸಮಾಜ ಬಿಜೆಪಿ ಕೈ ಹಿಡಿಯಿತು.

* ಮಾದಿಗರು ಬಿಜೆಪಿಗೆ ಬೆಂಬಲ ನೀಡಿದರು.

* ಮದಲೂರು ಕೆರೆಗೆ ನೀರು ಹರಿಸುವ ಭರವಸೆ ಬಿಜೆಪಿ ಬಲವನ್ನು ಅಪಾರವಾಗಿ ಹೆಚ್ಚಿಸಿತು.

* ಜಾತಿವಾರು ಸಭೆಗಳನ್ನು ನಡೆಸಿ ಸಣ್ಷ ಪುಟ್ಡ ಜಾತಿಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದು.

* ರಾಜೇಶ್ ಗೌಡ ಹೊಸ ಮುಖ ಮತ್ತು ಅವರ ತಂದೆ ಮಾಜಿ ಸಂಸದ ಮೂಡಲಗಿರಿಯಪ್ಪ ಕಾರಣದಿಂದ ಕುಂಚಿಟಿಗರು ಹೊಸ ನಾಯಕನನ್ನು ಕಂಡುಕೊಂಡರು.

* ಜೆಡಿಎಸ್ ದುರ್ಬಲವಾಗಿದ್ದು ಬಿಜೆಪಿ ಬಲ ಹೆಚ್ಚಿಸಿತು. ಜೆಡಿಎಸ್ ಗೆಲ್ಲುವುದಿಲ್ಲ ಎಂಬುದು ಅರಿವಾದ ನಂತರ ಆ ಪಕ್ಷದ ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡಿದರು.

* ಬಿಜೆಪಿ ಆರಂಭದಲ್ಲಿಯೇ ಕ್ಷೇತ್ರದಲ್ಲಿ ಮಾಬ್ ಸೃಷ್ಟಿಸಿತು. ಬಿಜೆಪಿ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಯುವ ಸಮುದಾಯ ಕೇಸರಿ ಶಲ್ಯವನ್ನು ತೊಟ್ಟಿತು.

ತುಮಕೂರಿಗೆ ಬಂದ ವಿಜಯೇಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದ ಬಿಜೆಪಿ ಕಾರ್ಯಕರ್ತರು

ವಿಜಯೇಂದ್ರನಿಗೆ ಕಿರೀಟ
ತುಮಕೂರು
: ಕೆ.ಆರ್.ಪೇಟೆ ಚುನಾವಣೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಶಿರಾ ಚುನಾವಣೆ ಉಸ್ತುವಾರಿ ಹೊತ್ತಿದ್ದರು. ಶಿರಾ ಗೆಲುವಿನ ಬಹುತೇಕ ಕ್ರೆಡಿಟ್ ವಿಜಯೇಂದ್ರ ಪಾಲಿಗೆ ಒಲಿಯಲಿದೆ.

ಅವರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಹಳ್ಳಿ ಸುತ್ತಿದರು. ಜಾತಿವಾರು ಸಭೆಗಳನ್ನು ನಡೆಸಿದರು. ಹೀಗೆ ತಮ್ಮದೇ ಆದ ತಂಡದ ಮೂಲಕ ಶಿರಾದಲ್ಲಿ ಕಾರ್ಯಾಚರಣೆ ನಡೆಸಿದರು. ಚುನಾವಣೆ ಪೂರ್ಣವಾದ ತರುವಾಯ 25 ಸಾವಿರ ಮತಗಳ ಅಂತರದಿಂದ ಗೆಲ್ಲತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ವಿಜಯೇಂದ್ರ ಅವರ ತಂತ್ರಗಳು ಶಿರಾದಲ್ಲಿ ಫಲ‌ ನೀಡಿವೆ.

ರಾಜೇಶ್ ಗೌಡ ಮಾತು: ನನಗೆ ಮಾರ್ಗದರ್ಶನ ನೀಡಿದ ಪಕ್ಷದ ವರಿಷ್ಠರಿಗೆ ಆಭಾರಿ. ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಯುವ ಸಮುದಾಯದ ಶ್ರಮ ನನ್ನ ಗೆಲುವಿನಲ್ಲಿ ಇದೆ.

ಎಲ್ಲ ಸಮುದಾಯದ ಜನರು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಅವರು ಹೇಳಿದಂತೆ ಮದಲೂರು ಕೆರೆಗೆ ನೀರು ಹರಿಯಲಿದೆ. ನೀರಾವರಿ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನನಗೆ ದೊರೆತಿರುವ ಈ ಎರಡೂವರೆ ವವರ್ಷದ ಅವಧಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT