ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಆದರ್ಶ ಪಾಲಿಸಿ: ತಹಶೀಲ್ದಾರ್ ಸಿಬ್ಗತ್ಉಲ್ಲಾ

Published 27 ಜೂನ್ 2023, 12:44 IST
Last Updated 27 ಜೂನ್ 2023, 12:44 IST
ಅಕ್ಷರ ಗಾತ್ರ

ಮಧುಗಿರಿ: ಕೆಂಪೇಗೌಡರ ಹೋರಾಟ, ಆದರ್ಶ, ತತ್ವ, ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಸಿಬ್ಗತ್ಉಲ್ಲಾ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.

ಕೆಂಪೇಗೌಡರು ನಾಲ್ಕು ದಶಕದ ಹಿಂದೆ ಸರ್ವ ಜನಾಂಗದ ಜನರು ವಾಸಿಸಲು ಬೆಂಗಳೂರು ನಿರ್ಮಿಸಿದರು. ಇಂದು ಇಡೀ ಜಗತ್ತಿನ ಕಣ್ಣು ಬೆಂಗಳೂರು ಮೇಲಿದೆ. ಕೆಂಪೇಗೌಡರು ತಮ್ಮ ಅವಧಿಯಲ್ಲಿ ಅಣೆಕಟ್ಟು, ಕೆರೆ ಮತ್ತು ದೇವಸ್ಥಾನ ನಿರ್ಮಿಸಿದರು ಎಂದರು.

ಸಾಹಿತಿ ಮ.ಲ.ನ ಮೂರ್ತಿ ಮಾತನಾಡಿ, ನಾಲ್ಕು ದಶಕದ ಹಿಂದೆ ದೂರದೃಷ್ಟಿಯ ಕನಸು ಹೊಂದಿ ಬೆಂಗಳೂರನ್ನು ನಿರ್ಮಿಸಿದ್ದರಿಂದ ಇಂದು ನಕ್ಷೆಯಲ್ಲಿ ಬೆಂಗಳೂರು ಗುರುತಿಸಲ್ಪಟ್ಟಿದೆ. ಇದೇ ಅಲ್ಲದೆ ಬೆಂಗಳೂರು ಶಿಕ್ಷಣದಲ್ಲಿ ತಾಂತ್ರಿಕತೆಯಲ್ಲಿ ಮುಂದುವರೆದಿದೆ ಎಂದು ತಿಳಿಸಿದರು.

ತಾ.ಪಂ ಇಒ ಲಕ್ಷ್ಮಣ್ ಮಾತನಾಡಿ, ಕೆಂಪೇಗೌಡರು ಅನಿಷ್ಟ ಪದ್ಧತಿ ವಿರುದ್ಧ ಅಂದಿನ ಕಾಲದಲ್ಲೇ ಹೋರಾಟ ನಡೆಸಿದ್ದರು. ಇಂದು ಬೆಂಗಳೂರು ಬೆಳೆದಿದ್ದರಿಂದ ಬೇರೆ ಬೇರೆ ರಾಜ್ಯಗಳ ಜನತೆ ದುಡಿಮೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಬಿಇಒ ತಿಮ್ಮರಾಜು, ಲೋಕೋಪಯೋಗಿ ಇಲಾಖೆ ಎಇಇ ರಾಜಗೋಪಾಲ್, ಸಿಡಿಪಿೊ ಅನಿತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ, ಅರಣ್ಯ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಕುಂಚಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್ ರಾಜಶೇಖರ್. ಗೌರವಾಧ್ಯಕ್ಷ ಡಿ.ಎಸ್ ಸಿದ್ದಪ್ಪ, ಕಾರ್ಯದರ್ಶಿ ಉಮೇಶ್, ಉಪಾಧ್ಯಕ್ಷ ಜಗದೀಶ್, ಖಜಾಂಚಿ ರಾಮಚಂದ್ರಪ್ಪ, ಚನ್ನಲಿಂಗಪ್ಪ, ಪುರಸಭೆ ಸದಸ್ಯ ಲಾಲಾಪೇಟೆ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT