ಗುರುವಾರ , ಆಗಸ್ಟ್ 5, 2021
21 °C

ಕೊರಟಗೆರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನಲ್ಲಿ ಒಂದೇ ದಿನ 19 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಬುಧವಾರ ತಡರಾತ್ರಿ ತಾಲ್ಲೂಕಿನ ಅಜ್ಜಿಹಳ್ಳಿ, ಮಿಣಸಂದ್ರ, ಎಂ.ವೆಂಕಟಾಪುರ, ವೆಂಕೋಬ ನಹಳ್ಳಿ, ಪಾತಗಾನಹಳ್ಳಿ, ಕೊರಟ ಗೆರೆ ಟೌನ್, ಟಿ.ಗೊಲ್ಲಹಳ್ಳಿ, ಕರೇಕಲ್ಲು ತಾಂಡ, ನಾಗೇನಹಳ್ಳಿ, ಗಟ್ಲಹಳ್ಳಿ, ಕುರುಬರ ಪಾಳ್ಯ, ಮಾರಗೊಂಡ ನಗುಣಿ, ಯತ್ತುಗಾನಹಳ್ಳಿ, ಜಂಪೇನಹಳ್ಳಿಯಲ್ಲಿ ತಲಾ ಒಂದು ಪ್ರಕರಣ, ಎಲೆರಾಂಪುರದಲ್ಲಿ ತಲಾ 2 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ತಾಲ್ಲೂಕು ಪಂಚಾಯಿತಿಯ ಒಬ್ಬ ನೌಕರರು ಸೇರಿದ್ದಾರೆ.

ಗುರುವಾರ ತಾಲ್ಲೂಕಿನ ಕತ್ತಿನಾಗೇನಹಳ್ಳಿ, ಮುದ್ದನಹಳ್ಳಿ, ಚಿಕ್ಕನಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಆದರೆ, ಸೋಂಕು ಕಂಡು ಬಂದವರಲ್ಲಿ ಬಹುತೇಕರಿಗೆ ನೆಗಡಿ, ಕೆಮ್ಮು, ಜ್ವರ ಈ ರೀತಿಯ ಯಾವುದೇ ಲಕ್ಷಣಗಳಿಲ್ಲ. ಗಂಟಲು ಸ್ರಾವ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ದೃಢಪಟ್ಟವರನ್ನು ತಾಲ್ಲೂಕಿನ ರೆಡ್ಡಿಕಟ್ಟೆ ಬಾರೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇರಿಸಲಾಗಿದೆ. ಗರ್ಭಿಣಿಯೊಬ್ಬರನ್ನು ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.

‘ತಾಲ್ಲೂಕು ಪಂಚಾಯಿತಿ ವಸತಿ ಪ್ರದೇಶ ಹಾಗೂ ಕಚೇರಿಯನ್ನು ಸೀಲ್‌ ಡೌನ್ ಮಾಡಲಾಗಿದೆ’ ಎಂದು ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು