ಬೇಸಿಗೆ ಬಂದಾಗ ಒಂದಷ್ಟು ನೀರಿನ ಅರವಿಗಳಿಗೆ ಬೇಡಿಕೆ ಬರುತ್ತದೆ. ಉಳಿದಂತೆ ಮಣ್ಣಿನ ಮಡಿಕೆಗಳನ್ನು ಕೇಳುವವರೆ ಇಲ್ಲ. ಇದನ್ನೇ ನಂಬಿಕೊಂಡು ಬಂದಿದ್ದೇವೆ. ಅದನ್ನು ಬಿಟ್ಟು ಬೇರೆ ಕಸುಬು ಗೊತ್ತಿಲ್ಲ. ಸಂತೆಗಳಿಗೆ ಮಡಿಕೆ ಮಾರಾಟಕ್ಕೆ ಹೋಗುತ್ತೇವೆ. ಒಮ್ಮೊಮ್ಮೆ ಕೂಲಿಯೂ ಹುಟ್ಟುವುದಿಲ್ಲ
ಶಿವಣ್ಣ ಇರಕಸಂದ್ರ ಕಾಲೊನಿ
ಬೇಡಿಕೆ ಇಲ್ಲದ ಕಾರಣಕ್ಕೆ ನಮ್ಮ ಕಸುಬು ಮಾಡುವವರು ಕಡಿಮೆಯಾಗಿದೆ. ಬೇಸಿಗೆಯಲ್ಲಿ ಅರವಿಗಳ ಬದಲಾಗಿ ಕೊಳಾಯಿ ಅಳವಡಿಸಿ ಮಣ್ಣಿನ ಹೂಜಿ ಮಾದರಿ ಮಡಿಕೆಗಳನ್ನು ತಯಾರಿಸಲಾಗುತ್ತಿದೆ. ಅದಕ್ಕೆ ಬೇಸಿಗೆಯಲ್ಲಿ ಸ್ವಲ್ಪ ಬೇಡಿಕೆ ಇದೆ. ಉಳಿದಂತೆ ಮದುವೆ ಸಾವಿನ ಸಂದರ್ಭದಲ್ಲಿ ಮಾರಾಟವಾಗುತ್ತವೆ.
ಪೂರ್ಣಿಮ, ಕೊರಟಗೆರೆ
ನಮ್ಮ ಕುಟುಂಬ ಕುಂಬಾರಿಕೆ ನಂಬಿಕೊಂಡು ಜೀವನ ನಡೆಸಿಕೊಂಡು ಬಂದಿದೆ. ಮಡಿಕೆ ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಆಗ ಲಾಭ ಇತ್ತು. ಈಗ ಮನೆಯಲ್ಲಿ ಕಸುಬು ಮಾಡುವವರಿಲ್ಲ. ಆದರೂ ತಯಾರು ಮಾಡುವ ಕಡೆ ಖರೀದಿ ಮಾಡಿ ಮಾರಾಟ ಮಾಡುತ್ತೇನೆ