ಮಂಗಳವಾರ, ಅಕ್ಟೋಬರ್ 20, 2020
22 °C

ಕೊರಟಗೆರೆ: ಚಿರತೆ ದಾಳಿಗೆ 4 ಮೇಕೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ (ತುಮಕೂರು ಜಿ): ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೊಮ್ಮಲದೇವಿಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಣೋಜಿಪಾಳ್ಯ ಗ್ರಾಮದಲ್ಲಿ ಶನಿವಾರ ಚಿರತೆ ದಾಳಿಯಿಂದ 4 ಮೇಕೆಗಳು ಮೃತಪಟ್ಟಿವೆ.

ಗ್ರಾಮದ ಗಂಗೂಬಾಯಿ ಎಂಬುವರಿಗೆ  ಮೇಕೆಗಳು ಸೇರಿದ್ದು ಶನಿವಾರ ತಡರಾತ್ರಿ ಚಿರತೆಯು ಮನೆಯ ಪಕ್ಕದ ರೊಪ್ಪದಲ್ಲಿ ಕಟ್ಟಿದ್ದ 4 ಮೇಕೆಗಳ ಕುತ್ತಿಗೆಗಳನ್ನು ಕಚ್ಚಿ ರಕ್ತ ಹೀರಿದೆ. 

 ₹ 40 ಸಾವಿರ‌ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಮೇಕೆ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ  ಗಂಗೂಬಾಯಿ ಅವರ ಕುಟುಂಬ ಕಂಗಾಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು