ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಸಂತ್ರಸ್ತರಿಗೆ ಸಾರಿಗೆ ನೌಕರರಿಂದ ₹16 ಲಕ್ಷ ಚೆಕ್ ವಿತರಣೆ

Last Updated 14 ಸೆಪ್ಟೆಂಬರ್ 2018, 12:15 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತುಮಕೂರು ವಿಭಾಗದ ನೌಕರರ ಸಂಘದಿಂದ ಕೊಡುಗು ನೆರೆ ಸಂತ್ರಸ್ತರ ನಿಧಿಗೆ ಒಂದು ದಿನದ ವೇತನ ₹ 16,81,124 ಮೊತ್ತದ ಚೆಕ್‌ನ್ನು ಶುಕ್ರವಾರ ನೌಕರರ ಸಂಘದ ಪದಾಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿ ಎನ್‌.ಗಜೇಂದ್ರಕುಮಾರ್ ಅವರಿಗೆ ಸಲ್ಲಿಸಿದರು.

ಚೆಕ್‌ ಸ್ವೀಕರಿಸಿ ಮಾತನಾಡಿದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ಮಾತನಾಡಿ,‘ ಸಾರಿಗೆ ನಿಗಮದ ನೌಕರರು ಬಹಳಷ್ಟು ಶ್ರಮ ಜೀವಿಗಳು. ಹಗಲು ರಾತ್ರಿ ಎನ್ನದೇ ಈ ನಾಡಿನ ಜನರ ಸೇವೆ ಮಾಡುತ್ತಿದ್ದಾರೆ. ಅವರು ನೀಡುವ ಪ್ರತಿ ಪೈಸೆಯೂ ಶ್ರಮದಿಂದ ಪಡೆದ ಹಣವಾಗಿದೆ. ಅದನ್ನು ಕೊಡುಗ ಸಂತ್ರಸ್ತರ ನಿಧಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನೌಕರರು ಸಂತ್ರಸ್ತರ ನಿಧಿಗೆ ನೀಡಿದ ಒಂದು ದಿನದ ವೇತನ ಮೊತ್ತದ ಚೆಕ್‌ನ್ನು ನಮ್ಮ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು. ವಿವಿಧ ಜಿಲ್ಲೆಗಳಿಂದ ಸಂಗ್ರಹಗೊಂಡ ಮೊತ್ತವನ್ನು ಸರ್ಕಾರಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಸಲ್ಲಿಸಲಿದ್ದಾರೆ. ಅಂದಾಜು ₹ 21 ಕೋಟಿ ಮೊತ್ತವನ್ನು ನೀಡುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ನೌಕರರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತಪ್ಪರಾಯಪ್ಪ ಮಾತನಾಡಿ,‘ ಸಂಸ್ಥೆಯ ನೌಕರರು ಈ ಹಿಂದೆಯೂ ನೆರೆ ಹಾವಳಿಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸಹಾಯ ಮಾಡಿದೆ. ಈ ಬಾರಿಯೂ ಒಂದು ದಿನದ ವೇತನವನ್ನು ನೀಡಿ ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಕಾರ್ಮಿಕ ಮುಖಂಡ ಅಕ್ತರ್ ಪಾಷ ಮಾತನಾಡಿ,‘ ನಾಡಿನ ಜನರ ತೊಂದರೆಗೊಳಗಾದಾಗ ಜಾತಿ, ಧರ್ಮ ಮೀರಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಮಾಡಿಕೊಂಡು ಬರಲಾಗಿದೆ ಎಂದು ಹೇಳಿದರು.

ಅಧಿಕಾರಿಗಳಾದ ಫಕ್ರುದ್ದೀನ್, ಬಸವರಾಜು, ನಾಗೇಶ್‌ಕುಮಾರ್, ಹಂಸವೀಣಾ, ಎಚ್.ಎಸ್.ರಾಜಶೇಖರ್, ರಾಮಾಂಜನೇಯ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT