ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

Last Updated 1 ಜನವರಿ 2020, 14:31 IST
ಅಕ್ಷರ ಗಾತ್ರ

ತುಮಕೂರು: ಜನವರಿ 2ರಂದುನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಜನಸಂದಣಿ ಮತ್ತು ವಾಹನಗಳ ಸಂಚಾರ ದಟ್ಟಣೆ ಆಗುವುದರಿಂದ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಕೆಎಸ್‍ಆರ್‌ಟಿಸಿ ಬಸ್‍ಗಳು ಹಾಗೂ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಂಗಳೂರು ಕಡೆಯಿಂದ ಬರುವ ವಾಹನಗಳು ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್, ಗಾರ್ಡನ್ ರಸ್ತೆ-ಗುಬ್ಬಿ ಗೇಟ್ ಮುಖಾಂತರ ಶಿವಮೊಗ್ಗ ಕಡೆ ಚಲಿಸಬೇಕು.

ಬೆಂಗಳೂರು ಕಡೆಯಿಂದ ಬಂದು ಶಿರಾ ಕಡೆ ತೆರಳುವ ವಾಹನಗಳು ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್-ಶಿರಾ ಗೇಟ್ ಮೂಲಕ ಎನ್‍ಎಚ್ 48ಕ್ಕೆ ಸಾಗಬೇಕು.

ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಗುಬ್ಬಿ ಗೇಟ್-ಕಾಲ್‍ಟೆಕ್ಸ್-ಬಸ್‍ನಿಲ್ದಾಣ-ಕೋತಿತೋಪು-ಹನುಮಂತಪುರ ಬೈಪಾಸ್ ಮೂಲಕ ಎನ್‍ಎಚ್-48ರಲ್ಲಿ ಬೆಂಗಳೂರಿಗೆ ತೆರಳಬೇಕು.

ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಶಿರಾ ಗೇಟ್-ಕೋಡಿ ಸರ್ಕಲ್-ಅಮಾನಿಕೆರೆ, ಕೋತಿತೋಪು-ಹನುಮಂತಪುರ ಬೈಪಾಸ್ ಮೂಲಕ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸಬೇಕು.

ಕುಣಿಗಲ್ ರಸ್ತೆ ಮೂಲಕ ಬರುವ ವಾಹನಗಳು ಕುಣಿಗಲ್ ಸರ್ಕಲ್-ಬಸ್‍ನಿಲ್ದಾಣ-ಕಾಲ್‍ಟೆಕ್ಸ್- ಕುಣಿಗಲ್ ಸರ್ಕಲ್ ಮೂಲಕ ಕುಣಿಗಲ್ ಕಡೆಗೆ ತೆರಳಬೇಕು.

ತುಮಕೂರು-ಬೆಂಗಳೂರು ವಾಹನಗಳು ತುಮಕೂರು ಬಸ್ ನಿಲ್ದಾಣದಿಂದ ಚರ್ಚ್ ಸರ್ಕಲ್-ಅಮಾನಿಕೆರೆ-ಹನುಮಂತಪುರ ಬೈಪಾಸ್ ಮುಖಾಂತರಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT