ಕುಣಿಗಲ್: ಬೆಳೆನಷ್ಟ ಪರಿಹಾರಕ್ಕೆ ಆಗ್ರಹಿಸಿದ ರೈತರನ್ನು ಪೊಲೀಸರ ವಶಕ್ಕೆ ನೀಡಿದ ತಹಶೀಲ್ದಾರ್ ಕ್ರಮ ಖಂಡಿಸಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೇಗೂರು ಕೆರೆಗೆ ಹೇಮಾವತಿ ನೀರು ಹರಿಸಿದ ಪರಿಣಾಮ ಚನ್ನತಿಮ್ಮಯ್ಯನಪಾಳ್ಯ ವ್ಯಾಪ್ತಿಯ 40 ಎಕರೆ ಪ್ರದೇಶದಲ್ಲಿನ ಬೆಳೆಗಳು ಮೂರು ವರ್ಷದಿಂದ ನಾಶವಾಗುತ್ತಿದ್ದು, ಕಳೆದ ವರ್ಷವೇ ರೈತರು ಮನವಿ ಸಲ್ಲಿಸಿದ್ದರೂ, ಪರಿಹಾರ ಸಿಕ್ಕಿರಲಿಲ್ಲ. ರೈತರು ಇತ್ತೀಚೆಗೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಕೇಳುವಾಗ ವಾಗ್ವಾದ ನಡೆದಿದ್ದು, ಅಸಮಾಧಾನಗೊಂಡ ತಹಶೀಲ್ದಾರ್ ರೈತರನ್ನು ವಶಕ್ಕೆ ತೆಗೆದುಕೊಳ್ಳಲು ನೀಡಿದ ಸೂಚನೆ ಮೇರೆಗೆ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದರು.

ಶುಕ್ರವಾರ ಕೆಆರ್ಎಸ್ ಪಕ್ಷದಿಂದ ಹೇಮಾವತಿ ನಾಲಾ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ನಂತರ ತಹಶೀಲ್ದಾರ್ ಕಚೇರಿ ಬಳಿ ಬಂದಾಗ ಅಧಿಕಾರಿಗಳು ಸಿಗದ ಕಾರಣ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೆಆರ್ಎಸ್ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಜನರ ಸಮಸ್ಯೆಗೆ ಸ್ಪಂದಿಸದ ತಹಶೀಲ್ದಾರ್ ಸರ್ವಾಧಿಕಾರಿ ಧೋರಣೆ ತಳೆದು, ರೈತರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಶಾಸಕರೇ ದೂರುತ್ತಿದ್ದಾರೆ. ಜನ ವಿರೋಧಿ ನೀತಿ ಅನುಸರಿಸುತ್ತಿರುವ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ರಶ್ಮಿ, ‘ಪರಿಹಾರ ಕೇಳಲು ಬಂದ ರೈತರು ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಇದರಿಂದಾಗ ಸಿಬ್ಬಂದಿ ಅಂದು ಕರ್ತವ್ಯ ನಿರ್ವಹಿಸಲಾಗದ ಸ್ಥಿತಿಗೆ ತಲುಪಿದ ಕಾರಣ ಪೊಲೀಸರ ಮೊರೆಹೋಗಿದ್ದು, ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದರು. ನಾನೇ ರೈತರನ್ನು ಬಿಡಲು ಪೊಲೀಸರಿಗೆ ಸೂಚನೆ ನೀಡಿದ್ದೆ’ ಎಂದರು.

ಪರಿಹಾರ ನೀಡುವ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸರ್ವೆ ಮಾಡಿ ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ. ನಂತರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ನಮ್ಮ ಪಾತ್ರವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಬೇಗೂರು ಕೆರೆಗೆ ನೀರು ಬಿಟ್ಟಿರುವುದರಿಂದ ಬೆಳೆಹಾನಿಯಾಗಿರುವುದರಿಂದ ಹೇಮಾವತಿ ನಾಲಾ ಅಧಿಕಾರಿಗಳು ಪರಿಹಾರ ನೀಡಬೇಕಿದೆ. ಮೂರು ವರ್ಷಗಳಿಂದ ನಷ್ಟವಾಗಿದೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.

ಹೇಮಾವತಿ ಎಂಜಿನಿಯರ್ ರವಿ ಪ್ರತಿಕ್ರಿಯಿಸಿ, ಬೇಗೂರು ಕೆರೆಗೆ ನೀರು ಬಿಟ್ಟ ಕಾರಣ ಸಮಸ್ಯೆಯಾಗಿದೆ. ಶಾಶ್ವತ ಪರಿಹಾರವಾಗಿ ತೂಬುಗಳ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನು ಮುಂದೆ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸ್ಥಳದಲ್ಲಿದ್ದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬೆಳೆ ನಷ್ಟದ ವರದಿ ನೀಡುವಂತೆ ಸೂಚನೆ ನೀಡಿ ಪರಿಹಾರಕ್ಕೆ ಶಿಫಾರಸು ಮಾಡುವಂತೆ ಸೂಚಿಸಿದರು.

ಡಿವೈಎಸ್ಪಿ ಓಂಪ್ರಕಾಶ್, ಕೆಆರ್ಎಸ್ ಪಕ್ಷದ ಪದಾಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ಮಂಜುನಾಥ್, ಚನ್ನಯ್ಯ, ಮಾರಪ್ಪ, ಚನ್ನತಿಮ್ಮಯ್ಯನ ಪಾಳ್ಯದ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.