ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

Published 26 ಏಪ್ರಿಲ್ 2024, 14:09 IST
Last Updated 26 ಏಪ್ರಿಲ್ 2024, 14:09 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ರಾಜವಂತಿ, ಕೆಂಚಗಾನಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಹೊರತುಪಡಿಸಿದರೆ ತಾಲ್ಲೂಕಿನಾದ್ಯಂತ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ.

ಎರಡೂ ಗ್ರಾಮಗಳಲ್ಲಿ ಮತದಾನ ಆರಂಭವಾಗುವುದಕ್ಕೆ ಮುನ್ನವೇ ಇವಿಎಂನಲ್ಲಿ ತಾಂತ್ರಿಕ ದೋಷ ಇರುವುದು ತಿಳಿದಿದೆ. ಕೂಡಲೇ ಎರಡೂ ಇವಿಎಂಗಳನ್ನು ಬದಲಿಸಿ ಸಮಸ್ಯೆ ಬಗೆಹರಿಸಲಾಗಿದೆ.

ನೀರಸ ಮತದಾನ: ಮಧ್ಯಾಹ್ನ 3 ಗಂಟೆವರೆಗೆ ಕೇವಲ ಶೇ 48ರಷ್ಟು ಮತದಾನವಾಗಿತ್ತು. ಬಿಸಿಲಿನ ತಾಪದಿಂದ ಮತದಾರರು ಮತಗಟ್ಟೆಗಳತ್ತ ಬರಲು ಹಿಂದೇಟು ಹಾಕಿದರು. ಸಂಜೆ 5ರ ವೇಳೆಗೆ ಶೇ 63.93ರಷ್ಟು ಮತದಾನವಾಗಿತ್ತು.

ಬೆಳಿಗ್ಗೆಯಿಂದಲೂ ಮತಗಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬರಲಿಲ್ಲ. ಸಂಜೆ ಸರದಿಯಲ್ಲಿ ನಿಂತು ಮತದಾರರು ಮತ ಹಾಕಲು ಆಸಕ್ತಿ ತೋರಿದರು.

ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಮತಗಟ್ಟೆಯಲ್ಲಿ ಶುಕ್ರವಾರ ನವ ದಂಪತಿ ಆಗಮಿಸಿದ ಟಿ ಎನ್ ಬೆಟ್ಟದ ಲಕ್ಷ್ಮಿಪತಿ ನವ್ಯಶ್ರಿ ಮತದಾನ ಮಾಡಿದರು.
ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಮತಗಟ್ಟೆಯಲ್ಲಿ ಶುಕ್ರವಾರ ನವ ದಂಪತಿ ಆಗಮಿಸಿದ ಟಿ ಎನ್ ಬೆಟ್ಟದ ಲಕ್ಷ್ಮಿಪತಿ ನವ್ಯಶ್ರಿ ಮತದಾನ ಮಾಡಿದರು.

ಮದುವೆ ಮಂಟಪದಿಂದ ಮತಗಟ್ಟೆಗೆ ನೇರವಾಗಿ ಬಂದ ಟಿಎನ್ ಬೆಟ್ಟದ ಲಕ್ಷ್ಮಿಪತಿ, ನವ್ಯಶ್ರಿ ದಂಪತಿ ತಾಲ್ಲೂಕಿನ ಪೆಮ್ಮನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT