ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

Published 26 ಏಪ್ರಿಲ್ 2024, 14:07 IST
Last Updated 26 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆ ಮಂದಗತಿಯಲ್ಲಿ ಪ್ರಾರಂಭವಾಗಿ 9ಗಂಟೆ ವೇಳೆಗೆ ಶೇ 6.33 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಶೇ 51.33ರಷ್ಟು ಮತದಾನವಾದರೆ, ಸಂಜೆ 5 ಗಂಟೆಗೆ ಶೇ 68.34ರಷ್ಟು ಮತದಾನವಾಗಿ ಸಂಜೆಯ ವೇಳೆಗೆ ಚುರುಕಾಯಿತು.

ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ಕುಟುಂಬ ಸಮೇತರಾಗಿ, ನಗರದ ವಿದ್ಯಾನಗರದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ತಾಲ್ಲೂಕಿನ ಚಿರತಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಕುಟುಂಬ ಸಮೇತರಾಗಿ, ಅದಲೂರು ಗ್ರಾಮದ ಮತಗಟ್ಟೆಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್ ಅವರು ಕುಟುಂಬ ಸಮೇತರಾಗಿ, ಬೇವಿನಹಳ್ಳಿ ಮತಗಟ್ಟೆಯಲ್ಲಿ ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮತದಾನ ಮಾಡಿದರು.

ನವದಂಪತಿ ಮತದಾನ: ನಗರದ ಮತಗಟ್ಟೆ ಸಂಖ್ಯೆ 149ರಲ್ಲಿ ಶುಕ್ರವಾರ ಮದುವೆಯಾದ ಕಾವ್ಯ, ಗಂಗಾಧರ್ ಜೋಡಿ ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಮತದಾನದ ಅವಧಿ ಮುಗಿದರೂ ನಗರ ಹಾಗೂ ಗ್ರಾಮಾಂತರ ಭಾಗದ ಕೆಲವು ಮತಗಟ್ಟೆಯಲ್ಲಿ ಮತದಾನ ಮಾಡಲು ಹೆಚ್ಚಿನ ಜನರಿದ್ದ ಕಾರಣ 6 ಗಂಟೆ ಒಳಗೆ ಮತಗಟ್ಟೆಯೊಳಗೆ ಬಂದ ಮತದಾರರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಯಿತು.

ಶಿರಾ ತಾಲ್ಲೂಕಿನ ಚಿರತಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಕುಟುಂಬ ಸಮೇತರಾಗಿ ಮತಚಲಾವಣೆ ಮಾಡಿದರು.
ಶಿರಾ ತಾಲ್ಲೂಕಿನ ಚಿರತಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಕುಟುಂಬ ಸಮೇತರಾಗಿ ಮತಚಲಾವಣೆ ಮಾಡಿದರು.
ಮತಚಲಾಯಿಸಿದ ನವದಂಪತಿ ಕಾವ್ಯ ಗಂಗಾಧರ್
ಮತಚಲಾಯಿಸಿದ ನವದಂಪತಿ ಕಾವ್ಯ ಗಂಗಾಧರ್
ಶಿರಾದಲ್ಲಿ ಶುಕ್ರವಾರ ಮತದಾನ‌ ಮಾಡಲು ಸಾಲಿನಲ್ಲಿ ನಿಂತಿದ್ದ ಮತದಾರರು
ಶಿರಾದಲ್ಲಿ ಶುಕ್ರವಾರ ಮತದಾನ‌ ಮಾಡಲು ಸಾಲಿನಲ್ಲಿ ನಿಂತಿದ್ದ ಮತದಾರರು

ಮಾತಿನ ಚಕಮಕಿ

ನಗರದ ಮತಗಟ್ಟೆ ಸಂಖ್ಯೆ 175 176ರ ಸಮೀಪ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಅರೋಪಿಸಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಅವರನ್ನು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಮಾತಿನ ಚಕಮುಕಿ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಅಧ್ಯಕ್ಷರು ಸ್ಥಳದಿಂದ ತೆರಳಿದರು. ಸ್ವಲ್ಪ ಸಮಯದ ನಂತರ ಅವರ ತಂದೆ ಕಾಂಗ್ರೆಸ್ ಮುಖಂಡ ಪೆದ್ದರಾಜು ಬಂದು ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಜೊತೆ ಮತ್ತೆ ಮಾತಿನ ಚಕಮುಕಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಬಿಗಿ ಬಂದೋಬಸ್ತ್‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT