ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮತದಾನ ಮಾಡಿದ ನವ ದಂಪತಿ

Published 26 ಏಪ್ರಿಲ್ 2024, 14:05 IST
Last Updated 26 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಶುಕ್ರವಾರ ಹಸೆಮಣೆ ಏರಿದ ನವ ದಂಪತಿ ನಂತರ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಶಾಂತಿನಗರದ ಸ್ವರೂಪ್‌ ಮತ್ತು ಗಿರಿನಗರದ ಶ್ವೇತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಹೂರ್ತದ ನಂತರ ಸ್ವರೂಪ್‌ ಅಳಶೆಟ್ಟಿಕೆರೆಪಾಳ್ಯದಲ್ಲಿ, ಶ್ವೇತಾ ಬಡ್ಡಿಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಂಡಿಪೇಟೆಯ ದೀಪಕ್‌– ಶಿರಾದ ದಿವ್ಯಾ ಮದುವೆ ನೆರವೇರಿತು. ಮಂಡಿಪೇಟೆ ಸರ್ಕಾರಿ ಕೋಟೆ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ದೀಪಕ್‌ ಮತ ಹಾಕಿದರು.

ಬಡ್ಡಿಹಳ್ಳಿಯ ತೇಜಸ್ವಿನಿ ಮತ್ತು ಮಡಕಾಶಿರಾದ ಷಣ್ಮುಗ ಸುಂದರ್‌ ಮದುವೆ ನಗರದಲ್ಲಿ ನಡೆಯಿತು. ವಿವಾಹದ ನಂತರ ತೇಜಸ್ವಿನಿ ಬಡ್ಡಿಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವಿಶೇಷ ಮತಗಟ್ಟೆ: ವಿವಿಧೆಡೆ ಮತಗಟ್ಟೆಗಳನ್ನು ಹೂವು, ತಳಿರು ತೋರಣ, ಬಲೂನುಗಳಿಂದ ಸಿಂಗರಿಸಲಾಗಿತ್ತು. ಮತಗಟ್ಟೆಯ ಮುಂಭಾಗದಲ್ಲಿ ‘ತಪ್ಪದೇ ಮತದಾನ ಮಾಡಿ’ ಎಂದು ರಂಗೋಲಿ ಬಿಡಿಸಿದ್ದರು. ಮತದಾನದ ಪ್ರಯುಕ್ತ ವಿವಿಧೆಡೆ ನಿರ್ಮಿಸಿದ್ದ ಮಾದರಿ ಮತಗಟ್ಟೆಗಳು ಗಮನ ಸೆಳೆದವು. ಸಖಿ, ಯುವ, ಅಂಗವಿಕಲರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿತ್ತು.

ತುಮಕೂರಿನ ಬಡ್ಡಿಹಳ್ಳಿಯಲ್ಲಿ ವಿವಾಹದ ನಂತರ ವಧು ತೇಜಸ್ವಿನಿ ಮತದಾನ ಮಾಡಿದರು. ವರ ಷಣ್ಮುಗ ಸುಂದರ್‌ ಹಾಜರಿದ್ದರು
ತುಮಕೂರಿನ ಬಡ್ಡಿಹಳ್ಳಿಯಲ್ಲಿ ವಿವಾಹದ ನಂತರ ವಧು ತೇಜಸ್ವಿನಿ ಮತದಾನ ಮಾಡಿದರು. ವರ ಷಣ್ಮುಗ ಸುಂದರ್‌ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT