ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಮಾಚಿದೇವರ ಜಯಂತಿ

ಮಡಿವಾಳ ಸಮುದಾಯದ ಗ್ರಾ.ಪಂ ಸದಸ್ಯರು, ವಿದ್ಯಾರ್ಥಿಗಳಿಗೆ ಪುರಸ್ಕಾರ
Last Updated 21 ಫೆಬ್ರುವರಿ 2021, 16:25 IST
ಅಕ್ಷರ ಗಾತ್ರ

ಶಿರಾ: ಮಡಿವಾಳ ಸಮುದಾಯದ ಪರವಾಗಿ ಹೋರಾಟ ಮಾಡುವವರು ಇಲ್ಲದಿರುವುದರಿಂದ ಸಮುದಾಯ ಪರಿಶಿಷ್ಟ ಜಾತಿಯ ಮೀಸಲು ಪಡೆಯಲು ತಡವಾಗುತ್ತಿದೆ ಎಂದು ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ನಗರದ ವೀರಘಂಟೆ ಮಡಿವಾಳ ಮಾಚಿದೇವ ದೇವಸ್ಥಾನದ ಆವರಣದಲ್ಲಿ ಭಾನುವಾರ ‌ಮಡಿವಾಳ ಮಾಚಿದೇವರ ಜಯಂತಿ, ದೇವಸ್ಥಾನದ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಮುದಾಯದ ಗ್ರಾ.ಪಂ ನೂತನ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರ
ಸ್ಕಾರ ಸಮಾರಂಭ ಉದ್ಘಾಟಸಿ ಮಾತನಾಡಿದರು.

ಕುರುಬ ಸಮುದಾಯದವರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರು ಇದುವರೆಗೆ ಕುಲಶಾಸ್ತ್ರ ಅಧ್ಯಯನಕ್ಕೆ ಅದೇಶ ನೀಡಿಲ್ಲ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ದಿನವೇ ಅನ್ನಪೂರ್ಣ ವರದಿ ಮೂಲಕ ಕುಲ
ಶಾಸ್ತ್ರ ಅಧ್ಯಯನ ನಡೆಸಿದ್ದು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದು ಮಾತ್ರ ಬಾಕಿ ಇದ್ದು, ಸ್ವಲ್ಪ ಸಮಯದಲ್ಲಿ ಪರಿಶಿಷ್ಟ ಜಾತಿ
ಮೀಸಲಾತಿ ದೊರೆಯುವುದು ಎಂದರು.

ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮಡಿವಾಳ ಸಮುದಾಯ ಹಿಂದುಳಿದ ಜಾತಿಗಳಲ್ಲಿಯೇ ಅತಿ ಹೆಚ್ಚು ಹಿಂದುಳಿದಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಅತ್ಯವಶ್ಯ ಎಂದರು.

ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಮಾತನಾಡಿ, ಮಡಿವಾಳ ಸಮುದಾಯ ಹೆಚ್ಚು ಹಿಂದುಳಿದಿದ್ದು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಮುದಾಯ ‌ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಮುಡಿಮಡು ರಂಗಶ್ವಾಮಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಮೀಸಲಾತಿಗಾಗಿ ಸ್ವಾಮೀಜಿ ಹಾಗೂ ನಂಜಪ್ಪ ಅವರು ಹೋರಾಟ ನಡೆಸಿದ್ದಾರೆ ಆದರೆ ಇದುವರೆಗೂ ಸಮಾಜಕಲ್ಯಾಣ ಸಚಿವರಾದವರು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಬಿಟ್ಟಿಲ್ಲ. ಈಗ ಸ್ವಾಮೀಜಿ ನಾಯಕತ್ವದಲ್ಲಿ ರಘು ಕೌಟಿಲ್ಯ ಅವರು ಸಮಾಜದ ಮುಖಂಡರನ್ನು ಸೇರಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಪರಿಶಿಷ್ಟ ಜಾತಿಯ ಮೀಸಲಾತಿ ದೊರಕಿಸಿಕೊಡಲು ಎಲ್ಲರೂ ಬೆಂಬಲ ನೀಡುವರು ಎಂದರು.

ಸಮುದಾಯದಿಂದ ಆಯ್ಕೆಯಾಗಿರುವ ಗ್ರಾ.ಪಂ ನೂತನ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾಂಗ್ರೆಸ್ ಮುಖಂಡರಾದ ಕಲ್ಕೆರೆ ರವಿಕುಮಾರ್, ಎಸ್.ಜೆ.ರಾಜಣ್ಣ, ರೇಖಾ ರಾಘವೇಂದ್ರ, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಶಾಂತಕುಮಾರ್, ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಬಿ.ಕೆ.ಈಶ್ವರ್, ಮಹೇಶ್ ಕುಮಾರ್, ಜಯಣ್ಣ, ಎಚ್.ಬಿ.ಜ್ಞಾನೇಶ್, ಗಂಗಾಧರ್, ನಟರಾಜು, ಕುಮಾರ್, ದೇವರಾಜಪ್ಪ, ಭೂತೇಶ್, ಕರಿಯಣ್ಣ, ಕಲ್ಲಪ್ಪ, ಪಾಪಣ್ಣ, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT