ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಥಾ

Published 6 ಜೂನ್ 2024, 14:21 IST
Last Updated 6 ಜೂನ್ 2024, 14:21 IST
ಅಕ್ಷರ ಗಾತ್ರ

ಪಾವಗಡ: ವಸತಿ, ಶಿಕ್ಷಣ ಇತ್ಯಾದಿ ಸವಲತ್ತು ಕಲ್ಪಿಸುವ ಮೂಲಕ ಮಕ್ಕಳು ಬಾಲಕಾರ್ಮಿಕರಾಗುವುದನ್ನು ತಡೆಯಬೇಕು ಎಂದು ನ್ಯಾಯಾಧೀಶೆ ವಿ. ಮಾದೇಶ ಹೇಳಿದರು.

ಪಟ್ಟಣದ ಗುರುಭವನ ಮೈದಾನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ವಿವಿಧ ಸಮಸ್ಯೆಗಳಿಂದ ಬಾಲ್ಯದ ಹಂತದಲ್ಲಿಯೇ ಕೆಲಸ ಮಾಡುವ ಸ್ಥಿತಿ ಎದುರಿಸುತ್ತಾರೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿ,  ಮೂಲ ಸೌಕರ್ಯ ಕೊಡಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ತಹಶೀಲ್ದಾರ್ ಸಂತೋಷ್ ಕುಮಾರ್, ಮಗು ಎಂದರೆ ಜೇಡಿಮಣ್ಣು ಇದ್ದ ಹಾಗೆ. ಅದಕ್ಕೆ ಯಾವ ಆಕಾರ ಕೊಟ್ಟರೆ ಆ ರೀತಿ ರೂಪುಗೊಳ್ಳುತ್ತದೆ. ಮಕ್ಕಳ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಪರಿಸರದಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ನ್ಯಾಯಾಧೀಶೆ ಸುಧೀರ್, ಬಿ.ಪ್ರಿಯಾಂಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಶೇಷನಂದನ್, ಕಾರ್ಯದರ್ಶಿ ಪ್ರಭಾಕರ್, ಸಿಡಿಪಿಒ ಸುನಿತಾ, ಕಾರ್ಮಿಕ ನಿರೀಕ್ಷಕ ಅಬ್ದುಲ್ ರಹೂಪ್, ಟಿಪಿಒ ಬಸವರಾಜು, ಶಿಕ್ಷಣ ಇಲಾಖೆಯ ವೇಣುಗೋಪಾಲ್ ರೆಡ್ಡಿ, ಚಂದ್ರಶೇಖರ್, ಬಿ.ಕೆ. ಶಿವಕುಮಾರ್, ಆರೋಗ್ಯ ಇಲಾಖೆಯ ಸುರೇಶ್, ಪಿಎಸ್ಐ ನಾರಾಯಣಸ್ವಾಮಿ, ಕೆಜಿಬಿವಿ ಶಾಲೆಯ ಉಮ್ಮಿ ಸಲ್ಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT