ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಮಾರುಕಟ್ಟೆ ವಿಶ್ಲೇಷಣೆ: ಕಡಿಮೆಯಾದ ಕೋಳಿ ಬೆಲೆ; ಬೀನ್ಸ್ ಕೆ.ಜಿ 120!

Published 21 ಏಪ್ರಿಲ್ 2024, 5:06 IST
Last Updated 21 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ತುಮಕೂರು: ತರಕಾರಿ, ಸೊಪ್ಪು ದುಬಾರಿಯಾಗಿದ್ದು, ಬೀನ್ಸ್ ದರ ಗಗನಮುಖಿಯಾಗಿದೆ. ಕೋಳಿ ಮಾಂಸದ ಬೆಲೆ ಕಡಿಮೆಯಾಗಿದ್ದರೆ, ಮೀನು ಮತ್ತಷ್ಟು ಏರಿಕೆ ಕಂಡಿದೆ. ಹಣ್ಣುಗಳು, ಬೇಳೆ, ಧಾನ್ಯ, ಮಸಾಲ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕೈಗೆಟುಕದ ಬೀನ್ಸ್: ಏರಿಳಿತ ಕಂಡಿದ್ದ ಬೀನ್ಸ್ ಬೆಲೆ ಒಮ್ಮೆಲೆ ಮೂರುನಾಲ್ಕು ಪಟ್ಟು ಹೆಚ್ಚಳವಾಗಿದೆ. ಕಳೆದ ವಾರ ಕೆ.ಜಿ ₹30–40ಕ್ಕೆ ಇಳಿಕೆಯಾಗಿದ್ದರೆ, ಈ ವಾರ ಕೆ.ಜಿ ₹100–120ಕ್ಕೆ ಜಿಗಿದಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಈ ಬೆಲೆಗೆ ಸಿಗುತ್ತಿದ್ದರೆ, ಚಿಲ್ಲರೆಯಾಗಿ ಕೆ.ಜಿ ₹150ರ ವರೆಗೂ ಮಾರಾಟ ಮಾಡಲಾಗುತ್ತಿದೆ.

ಬೇಸಿಗೆ ಬಿಸಿಲ ಝಳ ತೀವ್ರವಾಗಿದ್ದು, ತೋಟದಲ್ಲಿ ಬೀನ್ಸ್ ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ತೋಟದಲ್ಲಿ ಗಿಡ ಒಣಗುತ್ತಿದ್ದು, ಇಳುವರಿ ತೀವ್ರವಾಗಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುವ ಆವಕವೂ ತಗ್ಗಿದೆ. ಈಗ ಮದುವೆ ಮತ್ತಿತರ ಶುಭ ಕಾರ್ಯಗಳು ನಡೆಯುತ್ತಿದ್ದು, ಬೀನ್ಸ್‌ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯಷ್ಟು ಪೂರೈಕೆ ಇಲ್ಲವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.

ಜತೆಗೆ ತರಕಾರಿಗಳ ದರವೂ ದುಬಾರಿಯಾಗಿದೆ. ಬೀಟ್ರೂಟ್, ಗೆಡ್ಡೆಕೋಸು, ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ಹೂ ಕೋಸು, ತೊಂಡೆಕಾಯಿ, ನುಗ್ಗೆಕಾಯಿ ಬೆಲೆ ಹೆಚ್ಚಳವಾಗಿದೆ. ಹಸಿರು ಮೆನಸಿನ ಕಾಯಿ, ಕ್ಯಾಪ್ಸಿಕಂ ಮತ್ತೆ ಏರಿಕೆಯಾಗಿದೆ. ಬಹುತೇಕ ತರಕಾರಿಗಳ ದರ ಕೆ.ಜಿಗೆ ₹10ರಿಂದ ₹20ರ ವರೆಗೂ ಏರಿಕೆ ಕಂಡಿದೆ. ಬೇಸಿಗೆಯಲ್ಲಿ ತರಕಾರಿ ಬೆಳೆ ಒಣಗುತ್ತಿದ್ದು, ಇಳುವರಿಯೂ ಕಡಿಮೆಯಾಗಿದೆ. ತಕ್ಷಣಕ್ಕೆ ಮಳೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಸೊಪ್ಪು ಏರಿಕೆ: ಬೇಸಿಗೆಯಲ್ಲಿ ಸೊಪ್ಪು ಬೆಳೆಯುವುದೇ ಕಷ್ಟಕರವಾಗಿದ್ದು, ಬೆಲೆ ಮತ್ತಷ್ಟು ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕಿತ್ತಳೆ ಹೆಚ್ಚಳ: ಕಿತ್ತಳೆ ಹಣ್ಣು ಬೆಲೆ ಒಮ್ಮೆಲೆ ದುಪ್ಪಟ್ಟು ಹೆಚ್ಚಳವಾಗಿದ್ದು, ಕೆ.ಜಿ ₹130–180ಕ್ಕೆ ಏರಿಕೆಯಾಗಿದೆ. ಕಳೆದ ವಾರ ಕೆ.ಜಿ ₹50 ಇತ್ತು. ಪಪ್ಪಾಯ ಹಣ್ಣು ಕೆ.ಜಿಗೆ ₹10 ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ಪಪ್ಪಾಯ ಸೇವನೆ ಕಡಿಮೆಯಾಗಿರುವುದು ಬೆಲೆ ಇಳಿಕೆಯಾಗುವಂತೆ ಮಾಡಿದೆ. ದ್ರಾಕ್ಷಿ ಹಣ್ಣಿನ ಬೆಲೆಯೂ ಅಲ್ಪ ಏರಿಕೆಯಾಗಿದೆ. ಉಳಿದ ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹92, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಧಾನ್ಯ, ಬೆಳೆ: ಧಾನ್ಯ, ಬೇಳೆ ಬೆಲೆಯಲ್ಲಿ ಹೆಚ್ಚಿನ ಏರು–ಪೇರು ಕಂಡುಬಂದಿಲ್ಲ. ಅಕ್ಕಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೂ, ಈ ವಾರ ಬಹುತೇಕ ಸ್ಥಿರವಾಗಿತ್ತು. ರಾಗಿ ದರ ಅಲ್ಪ ಹೆಚ್ಚಳವಾಗಿದೆ.

ಮಸಾಲೆ ಪದಾರ್ಥ: ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದ ಧನ್ಯ ದರ ಈ ವಾರ ತುಸು ಹೆಚ್ಚಳವಾಗಿದೆ. ಹುಣಸೆ ಹಣ್ಣಿಗೆ ಉತ್ತಮ ಬೆಲೆ ಇದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹230–250, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200–220, ಹುಣಸೆಹಣ್ಣು ₹140–160, ಕಾಳುಮೆಣಸು ಕೆ.ಜಿ ₹620–630, ಜೀರಿಗೆ ಕೆ.ಜಿ ₹300–320, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹950–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಬಾದಾಮಿ ಕೆ.ಜಿ ₹650–660, ಗೋಡಂಬಿ ಕೆ.ಜಿ ₹600–650, ಒಣದ್ರಾಕ್ಷಿ ಕೆ.ಜಿ ₹190–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ರಂಜಾನ್, ಯುಗಾದಿ ಹಬ್ಬದ ಸಮಯದಲ್ಲಿ ಗಗನಮುಖಿಯಾಗಿದ್ದ ಕೋಳಿ ಮಾಂಸದ ಬೆಲೆ ಒಮ್ಮೆಲೆ ಕೆ.ಜಿಗೆ ₹40 ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಈಚೆಗೆ ಬೆಲೆ ತಗ್ಗಿದೆ. ಆದರೆ ಫಾರಂ ಕೋಳಿ ಬೆಲೆ ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್‌ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.

ಮೀನು ದುಬಾರಿ: ಸಮುದ್ರ ಮೀನಿನ ಆವಕ ಕಡಿಮೆಯಾಗಿದ್ದು, ಬೆಲೆ ತೀವ್ರವಾಗಿ ಹೆಚ್ಚಳವಾಗಿದೆ. ಬಂಗುಡೆ ಕೆ.ಜಿ ₹280, ಬೂತಾಯಿ ಕೆ.ಜಿ ₹250, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹1,080, ಬಿಳಿಮಾಂಜಿ ಕೆ.ಜಿ ₹1,380, ಕಪ್ಪುಮಾಂಜಿ ಕೆ.ಜಿ ₹850, ಇಂಡಿಯನ್ ಸಾಲ್ಮನ್ ಕೆ.ಜಿ ₹960, ಸೀಗಡಿ ಕೆ.ಜಿ ₹480–780, ಏಡಿ ಕೆ.ಜಿ 500ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು (ಬೆಲೆ ಕೆ.ಜಿ ₹)

ಸೇಬು;200

ದಾಳಿಂಬೆ;200

ಮೂಸಂಬಿ;80

ಕಿತ್ತಳೆ;130–180

ಸಪೋಟ;100

ಏಲಕ್ಕಿ ಬಾಳೆ;55

ಪಚ್ಚಬಾಳೆ;30

ಸೀಬೆ;100

ಪೈನಾಪಲ್;90

ಪಪ್ಪಾಯ;30

ಕರಬೂಜ;50

ಕಲ್ಲಂಗಡಿ;30

ದ್ರಾಕ್ಷಿ;80

ಕಪ್ಪು ದ್ರಾಕ್ಷಿ;200

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;155–165

ಕಡಲೆ ಬೇಳೆ;75–80

ಉದ್ದಿನ ಬೇಳೆ;135–140

ಹೆಸರು ಬೇಳೆ;115–120

ಕಡಲೆಕಾಳು;75–80

ಹೆಸರು ಕಾಳು;120–125

ಅಲಸಂದೆ;90–95

ಅವರೆಕಾಳು;125–130

ಹುರುಳಿಕಾಳು;70–75

ಹುರಿಗಡಲೆ;90–95

ಬಟಾಣಿ;100–105

ಕಡಲೆ ಬೀಜ;115–120

ಗೋಧಿ;40–44

ಸಕ್ಕರೆ;39–40

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;100–120

ಕ್ಯಾರೇಟ್;40–50

ಬೀಟ್ರೂಟ್‌;35–40

ಈರುಳ್ಳಿ;25–30

ಬೆಳ್ಳುಳ್ಳಿ;160–180

ಟೊಮೆಟೊ;15–20

ಆಲೂಗಡ್ಡೆ;35–40

ಗೆಡ್ಡೆಕೋಸು;35–40

ಮೂಲಂಗಿ;35–40

ಬೆಂಡೆಕಾಯಿ;30–35

ಬದನೆಕಾಯಿ;20–25

ಎಲೆಕೋಸು;25–30

ಹೂಕೋಸು(1ಕ್ಕೆ);40

ತೊಂಡೆಕಾಯಿ;30–40

ಹಾಗಲಕಾಯಿ;25–30

ನುಗ್ಗೆಕಾಯಿ;30–40

ಮೆಣಸಿನಕಾಯಿ;50–60

ಕ್ಯಾಪ್ಸಿಕಂ;50–60

ಶುಂಠಿ;100–120

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;5–6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT