ಗುರುವಾರ , ಆಗಸ್ಟ್ 13, 2020
28 °C

ಕೊರೊನಾ: ಪಾಲಿಕೆಗೆ ಬಾರದ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: 35ನೇ ವಾರ್ಡ್ ವ್ಯಾಪ್ತಿಯ ಖಾದರ್ ನಗರಕ್ಕೆ ಮೇಯರ್ ಫರೀದಾ ಬೇಗಂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.

ಖಾದರ್ ನಗರದಲ್ಲಿ ಕಂದಾಯ ಭೂಮಿ ಪರಿವರ್ತನೆ ಸಮಸ್ಯೆ ಇದೆ. ಇಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸಿದ್ಧವಾಗಿಲ್ಲ. 2ನೇ ಹಂತದ ಯುಜಿಡಿ ಯೋಜನೆ ಕೈಗೆತ್ತಿಕೊಳ್ಳದ ಕಾರಣ ಯುಜಿಡಿ ಸಮಸ್ಯೆ ಎದುರಾಗಿದೆ. ಹಾಗಾಗಿ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕು. ಉದ್ಯಾನ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸುವಂತೆ ಎಂಜಿನಿಯರ್‌ಗಳಿಗೆ ಮೇಯರ್ ನಿರ್ದೇಶನ ನೀಡಿದರು.

ಕೊರೊನಾ ಕಾರಣ ಅನುದಾನಗಳು ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆದರೂ ಜನರಿಗೆ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಖಾದರ್ ನಗರ, ಬಂಡೇಪಾಳ್ಯ, ದೇವರಾಯಪಟ್ಟಣದಲ್ಲಿ ಯುಜಿಡಿ, ಚರಂಡಿ ಸಮಸ್ಯೆ ತೀವ್ರವಾಗಿದೆ. ಈ ಬಡಾವಣೆಗಳಲ್ಲಿ ಸಮರ್ಪಕ ಯೋಜನೆ ಮಾಡಿಲ್ಲದ ಕಾರಣ ಸಮಸ್ಯೆಗಳು ಇವೆ. ಈ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.