ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಿಂಗಳು 150ಕ್ಕೂ ಹೆಚ್ಚು ರಾಸು ಸಾವು: ಸಿ.ವಿ.ಮಹಲಿಂಗಯ್ಯ ಕಳವಳ

Last Updated 22 ಸೆಪ್ಟೆಂಬರ್ 2021, 3:39 IST
ಅಕ್ಷರ ಗಾತ್ರ

ತುರುವೇಕೆರೆ: ಜಿಲ್ಲೆಯಲ್ಲಿ ಪ್ರತಿ ತಿಂಗಳೂ ಕನಿಷ್ಠ 150ಕ್ಕೂ ಹೆಚ್ಚು ರಾಸುಗಳು ವಿವಿಧ ಕಾಯಿಲೆಗಳಿಂದ ಮೃತಪಡುತ್ತಿರುವುದು ಕಳವಳ ಉಂಟು ಮಾಡುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.

ಪಟ್ಟಣದ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೃತಪಟ್ಟ 34 ರಾಸುಗಳ ಮಾಲೀಕರಿಗೆ ₹15 ಲಕ್ಷದ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಸಲಾಗಿದೆ. ಜಿಲ್ಲಾ ಒಕ್ಕೂಟದಿಂದ ಶೇಕಡಾ 60ರಷ್ಟು, ಟ್ರಸ್ಟ್‌ನಿಂದ ಶೇ 20ರಷ್ಟು ಮತ್ತು ಸಂಘದಲ್ಲಿರುವ ಕಲ್ಯಾಣ ನಿಧಿಯಿಂದ ಶೇ 20ರಷ್ಟು ಹಣವನ್ನು ವಿಮಾ ಕಂತಿಗೆ ನೀಡುವ ಮೂಲಕ ರೈತರಿಗೆ ಉಚಿತವಾಗಿ ವಿಮೆ ಸೌಲಭ್ಯ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎನ್ಎಸ್ಸಿ, ಬಿಫಾರ್ಮ್ ವಿದ್ಯಾಭ್ಯಾಸ ಮಾಡುವ ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರಥಮ ವರ್ಷದಲ್ಲಿ ಪ್ರೋತ್ಸಾಹ ಧನವಾಗಿ ₹25 ಸಾವಿರ ನೀಡಲಾಗುವುದು. ಬಿಇ, ಬಿಎಸ್‌ಸಿ, ಅಗ್ರಿಕಲ್ಚರ್, ಸಿರಿಕಲ್ಚರ್, ಮತ್ತು ಎಂಎಸ್ಸಿ ಓದುವ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 223 ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ಪ್ರಾರಂಭಿಸಲಾಗಿದೆ. ಮೃತಪಟ್ಟ ಪಡ್ಡೆ ರಾಸುಗಳಿಗೂ ₹10 ಸಾವಿರವನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ಹುಲ್ಲಿನ ಬಣವೆ ಸುಟ್ಟಲ್ಲಿ ₹10 ಸಾವಿರ ಪರಿಹಾರ ನೀಡಲಾಗುತ್ತದೆ. ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್‌ಗಳಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ. 15 ಸಾವಿರ ರಬ್ಬರ್ ಮ್ಯಾಟ್ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದರು.

ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್ ಮತ್ತು ದಿವಾಕರ್ ಮತ್ತು ಫಲಾನುಭವಿ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT