ಮಂಗಳವಾರ, ಜುಲೈ 27, 2021
24 °C
ಜಲ ಸಂಗ್ರಹಗಾರಕ್ಕೆ ಭೇಟಿ

ನೀರು ಪೂರೈಕೆಯಲ್ಲಿ ನಗರಸಭೆ ವಿಫಲ: ಟಿ.ಬಿ.ಜಯಚಂದ್ರ ಆರೋಪ

ಪ್ರಜಾವಾಣಿ‌ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಆರೋಪಿಸಿದರು.

ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ದೊಡ್ಡ ಕೆರೆಯ ಜಲ ಸಂಗ್ರಹಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ
ಮಾತನಾಡಿದರು.

ಕೆರೆಯಲ್ಲಿ ಸಾಕಷ್ಟು ನೀರಿದ್ದರೂ, ಶುದ್ಧೀಕರಣ ಘಟಕದ ಯಂತ್ರ ಕೆಟ್ಟಿದೆ ಎಂದು ದುರಸ್ತಿ ಮಾಡದೇ ಕೊಳಚೆ ನೀರು ಪೂರೈಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಗರಸಭೆ ಅವರು ಮನೆಗಳಿಗೆ ಕೊಳಚೆ ನೀರು ಪೂರೈಕೆ ಮಾಡಿರುವುದರಿಂದ ಮನೆಯಲ್ಲಿ ನೀರಿನ ಶೇಖರಣೆ ಮಾಡುವ ತೊಟ್ಟಿಗಳು ಕಲುಷಿತವಾಗಿದೆ. ಇದನ್ನು ಸ್ವಚ್ಛಗೊಳಿಸಲು ನೂರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನಗರಸಭೆ ಒಂದು ವರ್ಷದ ನೀರಿನ ಕಂದಾಯವನ್ನು ಮನ್ನಾ ಮಾಡಬೇಕು ಎಂದರು.

ನಗರಸಭೆಯಲ್ಲಿ ಜನ ಪ್ರತಿನಿಧಿಗಳು ಇಲ್ಲದ ಸಮಯದಲ್ಲಿ‌ ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಆದರೆ ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಲು ಶಾಸಕರು ವಿಫಲವಾಗಿದ್ದು ಜನರು ಸಂಕಷ್ಟ ಪಡುವಂತಾಗಿದೆ ಎಂದರು.

ಮುಖಂಡರಾದ ಅಮಾನುಲ್ಲಾಖಾನ್, ಜಾಫರ್, ಪಾಂಡುರಂಗಪ್ಪ, ಹಬೀಬ್ ಖಾನ್, ಶ್ರೀನಿವಾಸ್, ಜೀಷಾನ್ ಅಹಮದ್, ಹರೀಶ್, ಬುರ್ರಾನ್ ಅಹಮದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು