ಶಿರಾ ತಾಲ್ಲೂಕಿನ ರತ್ನಸಂದ್ರ ಗ್ರಾಮದಲ್ಲಿ ನಿರ್ಮಿಸಿದ ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು
ಮೂಲಭೂತ ಸೌಲಭ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ನಡೆಸಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಕಾಂಪೌಂಡ್ ಆಟದ ಮೈದಾನ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
– ಬಿ.ಶಾಲಿನಿ, ಅಧ್ಯಕ್ಷೆ ಗ್ರಾಮ ಪಂಚಾಯಿತಿ ಯಡಿಯೂರು
ಆಟದ ಮೈದಾನ ಕಾಂಪೌಂಡ್ ನಿರ್ಮಿಸಿದ ನಂತರ ಶಾಲೆಯ ದಾಖಲಾತಿ ಹೆಚ್ಚಾಗಿದೆ. ಈ ಹಿಂದೆ ಶಾಲಾ ಆವರಣ ಕುಡುಕರ ಅಡ್ಡೆಯಾಗಿತ್ತು. ಈಗ ಎಲ್ಲ ರೀತಿಯಿಂದಲೂ ಬದಲಾವಣೆ ಕಂಡಿದೆ. ವಾಲಿಬಾಲ್ ಕೊಕ್ಕೊ ಮೈದಾನದಲ್ಲಿ ಸದಾ ಮಕ್ಕಳ ಕಲವರ ಕಾಣಿಸುತ್ತದೆ.
– ಕೆ.ಎಸ್.ಕಿರಣ್, ಸದಸ್ಯ ಗ್ರಾಮ ಪಂಚಾಯಿತಿ ಕೆಸ್ತೂರು
ಆವರಣದಲ್ಲಿ ಮಕ್ಕಳ ಓಡಾಟ ಕಷ್ಟವಾಗುತ್ತಿತ್ತು. ಮಳೆ ಬಂದರೆ ಆವರಣದಲ್ಲಿ ಕೆಸರು ತುಂಬಿಕೊಳ್ಳುತಿತ್ತು. ಈಗ ಮೈದಾನದ ವ್ಯವಸ್ಥೆ ಮಾಡಲಾಗಿದೆ. ಶಾಲಾಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳ ಕಲಿಕೆಗೆ ನೆರವಾಗಿದೆ.
– ರಮೇಶ್ ಕುಮಾರ್, ಮುಖ್ಯ ಶಿಕ್ಷಕ ಸರ್ಕಾರಿ ಶಾಲೆ ಕಾಳಂಜಿಹಳ್ಳಿ ತುರುವೇಕೆರೆ
ಆಟದ ಮೈದಾನ ನಿರ್ಮಿಸಿರುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ಈಗ ಶಾಲೆಯ ಮಕ್ಕಳ ಅಭ್ಯಾಸಕ್ಕೆ ಮೈದಾನ ನೆರವಾಗುತ್ತಿದೆ.
– ಶಿವಪ್ರಸಾದ್, ಕಬಡ್ಡಿ ಕ್ರೀಡಾಪಟು ಕೆಸ್ತೂರು
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆ ಪಕ್ಕದಲ್ಲಿ ಶೌಚಾಲಯ ಕಾಂಪೌಂಡ್ ನಿರ್ಮಿಸಲಾಗಿದೆ. ಇದರ ಜತೆಗೆ ಬ್ಯಾಡ್ಮಿಂಟನ್ ಕೊಕ್ಕೊ ಅಂಕಣ ಸಿದ್ಧಪಡಿಸಲಾಗಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ನರೇಗಾ ನೆರವಿನ ಹಸ್ತ ಚಾಚಿದೆ.
– ಕಲಾವತಿ, ಎಸ್‌ಡಿಎಂಸಿ ಅಧ್ಯಕ್ಷೆ ಕೊಡಿಗೇನಹಳ್ಳಿ
ಶೌಚಾಲಯ ನಿರ್ಮಾಣದಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಅನುಕೂಲವಾಗಿದೆ. ನರೇಗಾ ಯೋಜನೆಯಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.