ಕುಣಿಗಲ್: ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಶಾಲಾ ಶೌಚಾಲಯ, ಆವರಣಗೋಡೆ, ಆಟದ ಮೈದಾನ ಮತ್ತು ದಾಸೋಹ ಭವನಗಳು ನಿರ್ಮಾಣವಾಗುತ್ತಿವೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಉಳಿವಿಗಾಗಿ ಪೋಷಕರು, ಹಳೆ ವಿದ್ಯಾರ್ಥಿಗಳು ಸೇರಿ ತಮ್ಮದೇ ಕಾಣಿಕೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಹೈಟೆಕ್ ಶೌಚಾಲಯ, ಆಟದ ಮೈದಾನ, ಶಾಲಾ ಆಸ್ತಿಗಳ ಒತ್ತುವರಿ ತಡೆಗೆ ಆವರಣಗೋಡೆ ನಿರ್ಮಾಣಕ್ಕೆ 2024-25 ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಸೂಚನೆ ಮೇರೆಗೆ ಶಾಲಾ ಅಭಿವೃದ್ಧಿ ಸಮಿತಿ, ಮುಖ್ಯಶಿಕ್ಷಕರ ತಂಡ ಶಾಲೆಗಳಿಗೆ ಅಗತ್ಯವಾದ ಸೌಕರ್ಯದ ಬಗ್ಗೆ ಪಟ್ಟಿ ನೀಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮನವಿ ಮೇರೆಗೆ ನರೇಗಾ ಯೋಜನೆಯಲ್ಲಿ 58, 166 ಮಾನವ ದಿನಗಳ ಬಳಕೆ ಮಾಡಿ ಒಟ್ಟು 224 ಕಾಮಗಾರಿಗಳು ನಡೆಯುತ್ತಿದ್ದು, 119 ಪೂರ್ಣಗೊಂಡಿದ್ದು, 75 ಕಾಮಗಾರಿ ಪ್ರಗತಿಯಲ್ಲಿದೆ.

ಆವರಣಗೋಡೆ ಒಟ್ಟು ₹5.55 ಕೋಟಿ ವೆಚ್ಚದಲ್ಲಿ 81 ಶಾಲೆಯಲ್ಲಿ ನಿರ್ಮಾಣ ಕಾರ್ಯದಲ್ಲಿ 41 ಕಾಮಗಾರಿ ಪೂರ್ಣಗೊಂಡಿದೆ. 22 ಪ್ರಗತಿಯಲ್ಲಿದ್ದು, 17 ಇನ್ನೂ ಪ್ರಾರಂಭವಾಗಿಲ್ಲ. ಶೌಚಾಲಯ ನಿರ್ಮಾಣಕ್ಕೆ ₹4.14 ಕೋಟಿ ವೆಚ್ಚದಲ್ಲಿ 93 ಕಾಮಗಾರಿಗಳ ಪೈಕಿ 41 ಪೂರ್ಣಗೊಂಡಿದೆ. 43 ಪ್ರಗತಿಯಲ್ಲಿದೆ. 9 ಇನ್ನೂ ಪ್ರಾರಂಭವಾಗಬೇಕಿದೆ.

₹3.12 ಕೋಟಿ ವೆಚ್ಚದ 50 ಆಟದ ಮೈದಾನ ಕಾಮಗಾರಿ ಪೈಕಿ 37 ಪೂರ್ಣಗೊಂಡಿದೆ. 10 ಪ್ರಗತಿಯಲ್ಲಿದ್ದು, 3 ಇನ್ನೂ ಪ್ರಾರಂಭವಾಗಬೇಕಿದೆ. ₹1.16 ಕೋಟಿ ವೆಚ್ಚದ 18 ದಾಸೋಹ ಭವನ ಕಾಮಗಾರಿಯಲ್ಲಿ 4 ಪೂರ್ಣಗೊಂಡಿದೆ. 14 ಕಾಮಗಾರಿಗಳು ಪ್ರಗತಿಯಲ್ಲಿದೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಪ್ರಮುಖ ಪಾತ್ರವಹಿಸುತ್ತಿರುವ ಕಾರಣ ಶಾಲೆಗೆ ಉತ್ತಮ ಪರಿಸರ, ಆವರಣಗೋಡೆ ನಿರ್ಮಾಣದಿಂದ ಒತ್ತುವರಿ ತಡೆಗೆ ಸಹಕಾರಿಯಾಗಿದೆ. ಮಕ್ಕಳ ದಾಖಲಾತಿ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಆಟದ ಮೈದಾನಗಳು ಕ್ರೀಡಾಚಟುವಟಿಕೆಗೆ ಸಹಕಾರಿಯಾಗಿದೆ. ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಕಾಂತರಾಜು ಹೇಳಿದರು.

ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯದ ಕೊರತೆ ಹೆಚ್ಚಾಗಿದೆ. ನರೇಗಾ ಯೋಜನೆ ಮೂಲಕ ಶಾಲೆ ಆವರಣ ಗೋಡೆ, ಶೌಚಾಲಯ ಮತ್ತು ದಾಸೋಹ ಭವನ ನಿರ್ಮಾಣದಿಂದ ಗ್ರಾಮೀಣ ಪ್ರದೇಶದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ಸಹಕಾರಿ. ದಾಖಲಾತಿ ಹೆಚ್ಚಳ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.