ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: 4 ವರ್ಷದ ಪದವಿ ಆರಂಭ

Last Updated 27 ಆಗಸ್ಟ್ 2021, 1:49 IST
ಅಕ್ಷರ ಗಾತ್ರ

ತುಮಕೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ವರ್ಷಗಳ ಪದವಿಯನ್ನು ಅನುಷ್ಠಾನಗೊಳಿಸುತ್ತಿದೆ.

ಪ್ರವೇಶ ಪ್ರಕ್ರಿಯೆಯು ಆ. 23ರಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಆನರ್ಸ್ ಪದವಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬಹುಹಂತದ ಪ್ರವೇಶ ಹಾಗೂ ನಿರ್ಗಮನದ ಅವಕಾಶ ಇರುವುದು ಈ ಪದವಿಯ ವಿಶೇಷವಾಗಿದೆ. ಪದವಿಯ ಮೊದಲ ವರ್ಷ ಪೂರೈಸಿದ ಬಳಿಕ ಅನಿವಾರ್ಯವಾಗಿ ವ್ಯಾಸಂಗ ಮುಂದುವರಿಸಲಾಗದ ಪರಿಸ್ಥಿತಿ ಬಂದರೆ ಅಂತಹ ವಿದ್ಯಾರ್ಥಿ ‘ಸರ್ಟಿಫಿಕೇಟ್’ ಪಡೆಯುತ್ತಾರೆ. ಎರಡನೇ ವರ್ಷದ ಅಂತ್ಯದಲ್ಲಿ ಕೋರ್ಸ್ ಬಿಟ್ಟರೆ ‘ಡಿಪ್ಲೊಮಾ’, ಮೂರನೇ ವರ್ಷ ಪೂರೈಸಿದರೆ ಪದವಿ ಹಾಗೂ ನಾಲ್ಕು ವರ್ಷದ ಅಧ್ಯಯನ ಪೂರ್ಣಗೊಳಿಸಿದರೆ ಆನರ್ಸ್ ಪದವಿ ಪಡೆದುಕೊಳ್ಳುತ್ತಾರೆ.

ಕೋರ್ಸ್ ಮಧ್ಯೆ ವ್ಯಾಸಂಗ ನಿಲ್ಲಿಸಿದರೆ ಮತ್ತೆ ಅಲ್ಲಿಂದಲೇ ವ್ಯಾಸಂಗ ಮುಂದುವರಿಸಲು ಅವಕಾಶವಿದೆ. ನಾಲ್ಕು ವರ್ಷಗಳ ಆನರ್ಸ್ ಪದವಿ ಪಡೆದವರು ನೇರವಾಗಿ ಪಿಎಚ್.ಡಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲೆ, ವಾಣಿಜ್ಯ ವಿಷಯಗಳನ್ನು ಓದುವುದಕ್ಕೂ, ಕಲಾ ವಿಭಾಗದ ವಿದ್ಯಾರ್ಥಿ ವಾಣಿಜ್ಯ, ವಿಜ್ಞಾನ ವಿಷಯಗಳನ್ನು ಓದುವುದಕ್ಕೂ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಉಳಿದೆರಡು ವಿಭಾಗಗಳ ವಿಷಯ ಅಧ್ಯಯನಕ್ಕೂ ಇದರಲ್ಲಿ ಅವಕಾಶವಿದೆ.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಸಮಾಜ ವಿಜ್ಞಾನ ವಿಷಯಗಳ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ಚೌಕಟ್ಟನ್ನು ರೂಪಿಸುವ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರ ನೇತೃತ್ವದಲ್ಲಿ ತುಮಕೂರು ವಿ.ವಿ ವ್ಯಾಪ್ತಿಯಲ್ಲಿ ಹೊಸ ಮಾದರಿಯ ಪದವಿ ಕೋರ್ಸ್‌ಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT