ತೋವಿನಕೆರೆ: ಸಮೀಪದ ಹಳ್ಳಿಗಳ ಜನರು ಜಮೀನಿನ ಬದು, ತೋಟಗಳಲ್ಲಿ ನೈಸರ್ಗಿಕವಾಗಿ ಬೆಳದ ಅಣಬೆಯನ್ನು ತಂದು ಕೆ.ಜಿಗೆ ₹175ರಂತೆ ಮಾರಾಟ ಮಾಡುತ್ತಿದ್ದಾರೆ.

ಕೆ.ಜಿಗೆ ₹175 ಕೊಟ್ಟು ಖರೀದಿಸಲು ಜನರು ತಯಾರಿದ್ದರೂ ಬೇಡಿಕೆಗೆ ಅನುಗುಣವಾಗಿ ಸಿಗದೆ ಇರುವುದನ್ನು ಹಂಚಿಕೊಳ್ಳುವ ಅನಿವಾರ್ಯವಿದೆ.

ನೈಸರ್ಗಿಕವಾಗಿ ಬೆಳೆದ ಅಣಬೆಯಿಂದ ವರ್ಷದಲ್ಲಿ ಹಲವು ಬಾರಿ ಖಾದ್ಯಗಳನ್ನು ಮಾಡಿ ಸವಿದರೆ ಜನರಿಗೆ ತೃಪ್ತಿ. ಅಣಬೆ ಸಿಗದಿದ್ದರೆ ತಾವೇ ಖುದ್ದಾಗಿ ತೋಟಗಳ ಸಾಲಿಗೆ ಹೋಗುತ್ತಾರೆ.

ಈ ಕಾಲದಲ್ಲಿ ಹಳ್ಳಿಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಬೆಳಿಗ್ಗೆಯೇ ಹೊಲಗಳಿಗೆ ಹೋಗಿ ಅಣಬೆ ಹುಡುಕಿ ತರುತ್ತಾರೆ. ಇದರಿಂದ ಸಾರು, ಬಿರಿಯಾನಿ, ಪಲಾವು, ಪಲ್ಯ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ.

‘ತೋಟದಲ್ಲಿ 30 ಕೆ.ಜಿಯಷ್ಟು ಅಣಬೆ ಈ ದಿನ ಸಿಕ್ಕಿತು. ಬೆಂಗಳೂರು, ತುಮಕೂರು, ಶಿರಾದ ಸಂಬಂಧಿಕರಿಗೆ ಕಳುಹಿಸಿಕೊಟ್ಟೆ. ಪ್ರತಿವರ್ಷ 4ರಿಂದ 5 ಬಾರಿ ಸೇವಿಸುತ್ತೇವೆ’ ಎನ್ನುತ್ತಾರೆ ಟಿ.ಎಸ್.ಲೋಕೇಶ್.

‘ಹೊಲ್ತಾಳು ಗ್ರಾಮದವರು 9 ಕೆ.ಜಿ ತಂದಿದ್ದರು. ಕೆ.ಜಿಗೆ ₹175ರಂತೆ ಎಲ್ಲವನ್ನು ಖರೀದಿ ಮಾಡಿ ಸಂಬಂಧಿಕರಿಗೆ ಕಳುಹಿಸಿದೆ. ರಾತ್ರಿ ಮುದ್ದೆ, ಅಣಬೆ ಸಾಂಬಾರ ಮಾಡಿಕೊಂಡು ಊಟ ಮಾಡುತ್ತೇವೆ’ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.