ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಲ್ಲೆಯಲ್ಲಿ ಪಾತ್ರವಿಲ್ಲ: ಪ್ರಮಾಣಕ್ಕೆ ಸಿದ್ಧ’

Last Updated 17 ಏಪ್ರಿಲ್ 2021, 8:57 IST
ಅಕ್ಷರ ಗಾತ್ರ

ತುರುವೇಕೆರೆ: ‘ಶಾಸಕ ಮಸಾಲಜಯರಾಂ ಮಗನ ಹಲ್ಲೆಗೆ ನಾನು ಪಿತೂರಿ ನಡೆಸಿಲ್ಲ ಎಂದು ನೆಟ್ಟಿಗೆರೆಯಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ದೇವರ ಮುಂದೆ ಪ್ರಮಾಣ ಮಾಡುವೆ’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಣಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಸಾಲ ಜಯರಾಂ ಅವರ ಮಗನ ಹಲ್ಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆದರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ನಮ್ಮ ಪಕ್ಷದವನೆಂಬ ಕಾರಣಕ್ಕೆ ನನ್ನ ಹೆಸರನ್ನು ಥಳಕು ಹಾಕಲಾಗುತ್ತಿದೆ’ ಎಂದರು.

‘ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನೆಡೆದಿದೆ ಎಂಬ ವಿಚಾರ ತಿಳಿದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ. ಆತನ ನೆರವಿಗೆ ಧಾವಿಸಿದ್ದೇನೆ. ಹಲ್ಲೆಗೆ ನಾನೇ ಕಾರಣ ಎಂಬ ಸಂಶಯವಿದ್ದರೇ ನಾನು ಬಳಕೆ ಮಾಡುತ್ತಿರುವ ಎರಡೂ ಮೊಬೈಲ್‌ಗಳ ಕಾಲ್ ಡೀಟೇಲ್ಸ್‌ ತೆಗೆದು ತನಿಖೆ ನಡೆಸಲಿ ನಾನು ಎಲ್ಲದಕ್ಕೂ ಸಿದ್ಧ’ ಎಂದು ಸ್ಪಷ್ಟಪಡಿಸಿದರು.

‘ನನ್ನ ರಾಜಕೀಯ ಜೀವನ ಮುಗಿಸುವುದಾಗಿ ಹೇಳಿಕೆ ನೀಡುವ ಮಸಾಲಜಯರಾಂ ಅವರೇ, ನನ್ನನ್ನು 15 ವರ್ಷಗಳ ಕಾಲ ಶಾಸಕನನ್ನಾಗಿ ಆರಿಸಿದ್ದು ಮತದಾರರು, ಅವರನ್ನು ಹಾಗೂ ದೈವಶಕ್ತಿಯನ್ನು ಪ್ರಬಲವಾಗಿ ನಂಬುವವನೂ ನಾನು. ನನ್ನ ರಾಜಕೀಯ ಅಸ್ತಿತ್ವದ ಬಗ್ಗೆ ಚಿಂತೆ ಬಿಟ್ಟು, ನಿಮ್ಮ ದುರಹಂಕಾರದ ಹೇಳಿಕೆಗಳಿಗೆ ಕಡಿವಾಣ ಹಾಕಿಕೊಳ್ಳಿ. ಲಾಂಗ್, ಮಚ್ಚು ಸಂಸ್ಕೃತಿ ಪರಿಚಯಿಸಿದ್ದು, ತಾವೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ನನ್ನ ಅವಧಿಯಲ್ಲಿ ಇಂತಹ ಘಟನೆಗಳಿಗೆ ನಾನು ಆಸ್ಪದ ನೀಡಿರಲಿಲ್ಲ’ ಎಂದು ಸಮರ್ಥಿಸಿಕೊಂಡರು.

ಗೋಷ್ಠಿಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಗಂಗಾಧರ್, ಯುವ ಜೆಡಿಎಸ್ ಅಧ್ಯಕ್ಷ ರಮೇಶ್, ಪ.ಪಂ ಮಾಜಿ ಅಧ್ಯಕ್ಷ ವಿಜಯೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಯ್ಯ, ಮಾಯಣ್ಣಗೌಡ, ವಕ್ತಾರ ಯೋಗೀಶ್, ನಾಗರಾಜ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT