ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ಕ್ಕೆ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ

Last Updated 16 ಜೂನ್ 2020, 6:05 IST
ಅಕ್ಷರ ಗಾತ್ರ

ತುಮಕೂರು: ದಶಕದ ಕೊನೆಯ ಹಾಗೂ ಈ ವರ್ಷದ ಮೊದಲಸೂರ್ಯಗ್ರಹಣ ಜೂನ್ 21ರಂದು ಸಂಭವಿಸಲಿದೆ. ಅಂದು ತುಮಕೂರಿನಲ್ಲಿ ಪಾರ್ಶ್ವಸೂರ್ಯಗ್ರಹಣ ಬೆಳಿಗ್ಗೆ 10 ಗಂಟೆ 11 ನಿಮಿಷ 22 ಸೆಕೆಂಡ್‌ಗೆ ಆರಂಭವಾಗಿ ಮಧ್ಯಾಹ್ನ 1.31 ಗಂಟೆಗೆ ಅಂತ್ಯಗೊಳ್ಳಲಿದೆ.

ಬೆಳಿಗ್ಗೆ 11 ಗಂಟೆ 46 ನಿಮಿಷ 11 ಸೆಕೆಂಡ್‍ಗೆ ಶೇ 37.8ರಷ್ಟು ಸೂರ್ಯನನ್ನು ಚಂದ್ರನು ಮರೆಮಾಡುವ ಅದ್ಭುತವಾದ ಖಗೋಳ ವಿದ್ಯಮಾನವನ್ನು ವೀಕ್ಷಿಸ ಬಹುದು ಎಂದು ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಸ್.ರವಿಶಂಕರ್ ತಿಳಿಸಿದ್ದಾರೆ.

ಅಂದು ವಿಜ್ಞಾನ ಕೇಂದ್ರದ ಆವರಣದಲ್ಲಿ ಕೋವಿಡ್–19 ಶಿಸ್ತನ್ನು ಅನುಸರಿಸಿ ಟೆಲಿಸ್ಕೋಪ್, ಸೂಜಿರಂಧ್ರ ಬಿಂಬಗ್ರಾಹಿ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ವಿಜ್ಞಾನ ಕೇಂದ್ರವು ಸುರಕ್ಷಿತ ಗ್ರಹಣ ವೀಕ್ಷಣೆಗೆ ಸೋಲಾರ್ ಫಿಲ್ಟರ್ ಮಾರಾಟ ಮಾಡಲಿದೆ. ನಾಗರಿಕರು ಮನೆ ಅಂಗಳದಲ್ಲೇ ಖಗೋಳ ವಿದ್ಯಮಾನ ವನ್ನು ಯಾವುದೇ ಭಯವಿಲ್ಲದೆ ನೋಡಬಹುದು. ಸೋಲಾರ್ ಫಿಲ್ಟರ್‌ಗಳನ್ನು 10.30ರಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಸಂಜೆ 4 ರಿಂದ 7ರ ವರೆಗೆ ಮಾರಾಟ ಮಾಡಲಾಗುವುದು. ಆಸಕ್ತರು ಮೊ 9663479416, 9449150242 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT