₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಎರಡೇ ವರ್ಷದಲ್ಲಿ ಸೌಂದರ್ಯ ಕಳೆದುಕೊಂಡ ಪಾರ್ಕ
ಪ್ರಶಾಂತ್ ಕೆ.ಆರ್.
Published : 16 ಸೆಪ್ಟೆಂಬರ್ 2024, 5:13 IST
Last Updated : 16 ಸೆಪ್ಟೆಂಬರ್ 2024, 5:13 IST
ಫಾಲೋ ಮಾಡಿ
Comments
ಈ ಪಾರ್ಕ್‌ನಲ್ಲಿ ಹಲವು ವರ್ಷಗಳಿಂದ ವಾಕಿಂಗ್ ಮಾಡುತ್ತಿದ್ದೇನೆ. ಇಲ್ಲಿ ನಮಗಿಂತ ಎತ್ತರವಾಗಿ ಗಿಡ ಗಂಟಿ ಬೆಳೆದಿವೆ. ಅಪರಿಚಿತರು ಎದುರಿಗೆ ಬಂದಾಗ ಭಯವಾಗುತ್ತದೆ. ವಾಕ್ ಮಾಡುವ ಜಾಗದಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಕಳ್ಳರ ಕಾಟ ಹೆಚ್ಚಾಗಿದೆ
ಕಮಲ ಗೋಕುಲ್ ವಾಯು ವಿಹಾರಿ
ವೃದ್ಧರು ಹಾಗೂ ಮಹಿಳೆಯರು ವಾಯು ವಿಹಾರ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳಲು ಆಸನಗಳು ಬೇಕಿದೆ. ಪಾರ್ಕ್‌ನಲ್ಲಿರುವ ಕುರ್ಚಿಗಳು ಮುಳ್ಳಿನ ಗಿಡಗಳಿಂದ ಮುಚ್ಚಿದ್ದು ಮುರಿದು ಹೋಗಿವೆ. ಪಾರ್ಕ್‌ಗೆ ಮೂಲ ಸೌಕರ್ಯ ಒದಗಿಸಬೇಕಿದೆ.
ಗಂಗಾಧರ್ ಜೆಮ್ಸ್ ಪೌಂಡೇಷನ್ ಕಾರ್ಯದರ್ಶಿ
ಕೆಆರ್‌ಐಡಿಎಲ್ ಸಂಸ್ಥೆಯವರು ಪಾರ್ಕ್ ನಿರ್ಮಿಸಿದ್ದು ಇನ್ನೂ ನಮ್ಮ ಇಲಾಖೆಗೆ ಹಸ್ತಾಂತರಿಸಿಲ್ಲ. ಆದರೂ ಸಾರ್ವಜನಿಕರ ಅಹವಾಲಿನ ಮೇರೆಗೆ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ
ದೊಡ್ಡಯ್ಯ ಸಣ್ಣ ನೀರಾವರಿ ಇಲಾಖೆ
ಪಾರ್ಕ್ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿದ್ದು ಇಲಾಖೆ ಜೊತೆ ನಗರಸಭೆಯಿಂದ ಸ್ವಚ್ಛತೆ ಹಾಗೂ ರಕ್ಷಣೆಯ ಬಗ್ಗೆ ಪತ್ರ ವ್ಯವಹಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾರ್ಕ್ ಅಭಿವೃದ್ಧಿಗೆ ಇಲಾಖೆ ಸದಸ್ಯರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.