ಪಾವಗಡ: ತಾಲ್ಲೂಕಿನ ವೀರಮ್ಮನಹಳ್ಳಿ ಗೇಟ್ ನಿಂದ ಪಳವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಳಿ ಶುಕ್ರವಾರ ಬೆಳಿಗ್ಗೆ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.
ವೈ.ಎನ್.ಹೊಸಕೋಟೆ ರವಿ (28) ಮೃತರು. ಟಾಟಾ ಏಸ್ ವಾಹನಕ್ಕೆ ಬೆಂಕಿ ಹಚ್ಚಿದ್ದು, ವಾಹನದಲ್ಲಿದ್ದ ರವಿ ಮೃತಪಟ್ಟಿದ್ದಾರೆ. ವಾಹನ ಸಂಪೂರ್ಣ ಸುಟ್ಟು ಹೋಗಿದೆ.
ಗುರುವಾರ ರಾತ್ರಿ ವೀರಮ್ಮನಹಳ್ಳಿ ಗೇಟ್ ಬಳಿಗೆ ಕರೆತಂದು ಬೆಂಕಿ ಹಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.