ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,214 ಮಂದಿಗೆ ಪಿಂಚಣಿ ಮಂಜೂರಾತಿ

ವಿವಿಧೆಡೆ ಪಿಂಚಣಿ ಅದಾಲತ್‌
Published 27 ಫೆಬ್ರುವರಿ 2024, 5:17 IST
Last Updated 27 ಫೆಬ್ರುವರಿ 2024, 5:17 IST
ಅಕ್ಷರ ಗಾತ್ರ

ತುಮಕೂರು: ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಫೆ. 1ರಿಂದ 26ರ ವರೆಗೆ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‍ನಲ್ಲಿ 1,214 ಜನರಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಗಿದೆ.

39 ಹೋಬಳಿಗಳಲ್ಲಿ ಅದಾಲತ್‌ ನಡೆದಿತ್ತು. ಇದರಲ್ಲಿ ಒಟ್ಟು 1,219 ಅರ್ಜಿಗಳು ಸ್ವೀಕೃತವಾಗಿದ್ದವು. ಸೂಕ್ತ ದಾಖಲೆಗಳಿಲ್ಲದ ಕಾರಣ 5 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಶಿರಾ ತಾಲ್ಲೂಕಿನಲ್ಲಿ 341, ಮಧುಗಿರಿ 185, ತುರುವೇಕೆರೆ 36, ತುಮಕೂರು 291, ಚಿಕ್ಕನಾಯಕನಹಳ್ಳಿ 53, ಕುಣಿಗಲ್ 53, ತಿಪಟೂರು 66, ಕೊರಟಗೆರೆ 65, ಪಾವಗಡ 29, ಗುಬ್ಬಿ ತಾಲ್ಲೂಕಿನಲ್ಲಿ 95 ಸೇರಿದಂತೆ ಒಟ್ಟು 1,214 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT