ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ರಸ್ತೆ ಬದಿ ಅವಧಿ ಮೀರಿದ ಔಷಧಿ ರಾಶಿ

Published : 22 ಆಗಸ್ಟ್ 2024, 14:19 IST
Last Updated : 22 ಆಗಸ್ಟ್ 2024, 14:19 IST
ಫಾಲೋ ಮಾಡಿ
Comments

ಕುಣಿಗಲ್: ಪಟ್ಟಣದ ರೈಲ್ವೆ ಸೇತುವೆ ಬಳಿ ಗುರುವಾರ ಅವಧಿ ಮೀರಿದ ಔಷಧಿಗಳ ರಾಶಿ ಪತ್ತೆಯಾಯಿತು. ಜಿಲ್ಲಾ ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನ್ ನಾಗೂರ್ ಹಾಗೂ ತಂಡ ವ್ಯವಸ್ಥಿತ ವಿಲೇವಾರಿಗೆ ಕ್ರಮ ತೆಗೆದುಕೊಂಡಿದೆ.

ಮುಂಜಾನೆ ನಡಿಗೆಗೆಂದು ಬಂದ ಜನರು ಸೇತುವೆ ಬಳಿ ಔಷಧಿಗಳ ರಾಶಿ ಕಂಡು ಪರಿಶೀಲಿಸಿದ್ದಾರೆ. ಎಲ್ಲವೂ ಅವಧಿ ಮೀರಿದ ಔಷಧಿಗಳಾಗಿದ್ದು, ಬಹುತೇಕ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವಿತರಿಸಬೇಕಿದ್ದ ಲೇಬಲ್ ಹೊಂದಿದ್ದವು.

ಅಧಿಕಾರಿಗಳು ಐದು ಚೀಲಗಳಲ್ಲಿ ತುಂಬಿಕೊಂಡು, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಕ್ರಮತೆಗೆದುಕೊಂಡಿದ್ದಾರೆ.

ಅವಧಿ ಮೀರಿದ ಔಷಧಗಳ ರಾಶಿ ಕಂಡ ನಾಗರಿಕರು ಮತ್ತು ಕರವೇ ಅಧ್ಯಕ್ಷ ಮಂಜುನಾಥ್, ಸರ್ಕಾರ ಬಡವರಿಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ವಿತರಣೆ ಮಾಡಲು ಸರಬರಾಜಿಗಾಗಿ ನೀಡಿದ್ದ ಔಷಧಿಗಳನ್ನು ವಿತರಣೆ ಮಾಡವಲ್ಲಿ ವಿಫಲರಾದವರು ಹಾಗೂ ವ್ಯವಸ್ಥಿತ ವಿಲೇವಾರಿ ಮಾಡದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT