ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಪಿಯು ಪರೀಕ್ಷೆ: ಶೇ 81ಕ್ಕೆ ಏರಿಕೆ

ಜಿಲ್ಲೆಗೆ ಉತ್ತಮ ಫಲಿತಾಂಶ; 20ನೇ ಸ್ಥಾನಕ್ಕೆ ಹೆಚ್ಚಳ
Published 11 ಏಪ್ರಿಲ್ 2024, 6:33 IST
Last Updated 11 ಏಪ್ರಿಲ್ 2024, 6:33 IST
ಅಕ್ಷರ ಗಾತ್ರ

ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ 81.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದ್ದು, ರಾಜ್ಯ ಮಟ್ಟದಲ್ಲಿ 20ನೇ ಸ್ಥಾನಕ್ಕೆ ಜಿಗಿದಿದೆ.

2023ನೇ ಸಾಲಿನಲ್ಲಿ 24ನೇ ಸ್ಥಾನಕ್ಕೆ ಕುಸಿದಿದ್ದರೆ, 2022ರಲ್ಲಿ 29ನೇ ಸ್ಥಾನಕ್ಕೆ ಇಳಿಕೆಯಾಗಿತ್ತು. ಕೋವಿಡ್ ಕಾರಣಕ್ಕೆ 2021ರಲ್ಲಿ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. 2020ರಲ್ಲಿ 23ನೇ ಸ್ಥಾನ, 2019ರಲ್ಲಿ 17ನೇ ಸ್ಥಾನ, 2018ರಲ್ಲಿ 21ನೇ ಸ್ಥಾನ ಪಡೆದುಕೊಂಡಿತ್ತು. ಫಲಿತಾಂಶದಲ್ಲಿ ಈ ಬಾರಿ ಕಳೆದ ಐದಾರು ವರ್ಷಗಳ ಹಿಂದಿನ ಮಟ್ಟಕ್ಕೆ ಏರಿಕೆ ಕಂಡು ಬಂದಿದೆ.

ಈ ವರ್ಷ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದು, ನಗರದ ವಿದ್ಯಾನಿಧಿ ಪಿಯು ಕಾಲೇಜಿನ ಎಂ.ಜ್ಞಾನವಿ ವಾಣಿಜ್ಯ ವಿಭಾಗದಲ್ಲಿ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಅದೇ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ (594 ಅಂಕ) 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಒಟ್ಟು 23,128 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 18,741 (ಶೇ 81.03) ಮಂದಿ ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ಹಾಗೂ ಹೊಸದಾಗಿ ಪರೀಕ್ಷೆ ತೆಗೆದುಕೊಂಡವರು ಸೇರಿದಂತೆ ಒಟ್ಟು 24,878 ಮಂದಿ ಪರೀಕ್ಷೆ ಬರೆದಿದ್ದು, 19,555 (ಶೇ 78.6) ಪಾಸಾಗಿದ್ದಾರೆ. ಇದೇ ಮೊದಲ ಬಾರಿಗೆ ಪರೀಕ್ಷೆ ಬರೆದ ಕಲಾ ವಿಭಾಗದಲ್ಲಿ ಶೇ 66.78, ವಾಣಿಜ್ಯ ಶೇ 80.56, ವಿಜ್ಞಾನ ವಿಭಾಗದಲ್ಲಿ ಶೇ 87.69ರಷ್ಟು ಫಲಿತಾಂಶ ಬಂದಿದೆ.

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ 75.74, ಬಾಲಕಿಯರು ಶೇ 80.7ರಷ್ಟು ತೇರ್ಗಡೆಯಾಗಿದ್ದಾರೆ. ಕಲಾ, ವಾಣಿಜ್ಯ ವಿಭಾಗದಲ್ಲಿ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದರೆ, ವಿಜ್ಞಾನ ವಿಭಾಗದಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. ಪ್ರತಿ ವರ್ಷವೂ ನಗರ ಪ್ರದೇಶದ ಮಕ್ಕಳ ಫಲಿತಾಂಶವೇ ಹೆಚ್ಚಿನ ಪ್ರಮಾಣದಲ್ಲಿ ಇರುತಿತ್ತು. ಆದರೆ ಈ ಬಾರಿ ನಗರ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮ ಪ್ರಮಾಣದಲ್ಲಿ (ಶೇ 81.1) ಪಾಸಾಗಿದ್ದಾರೆ.

ವಿವರ;ಒಟ್ಟು;ಮೊದಲ ಬಾರಿಗೆ;ಬಾಲಕ;ಬಾಲಕಿಯರು

ಒಟ್ಟು;24,878;23,128;10,666;14,212

ಪಾಸು;19,555;18,741;8,078;11,477

ಶೇ;78.06;81.03;75.74;80.76

ಕಲೆ;5,322;4,497;2,665;2,657

ಪಾಸು;3,413;3,003;1,566;1,847

ಶೇ;64.13;66.78;58.76;69.51

ವಾಣಿಜ್ಯ;8,935;8,411;3,728;5,207

ಪಾಸು;6,996;6,776;2,809;4,187

ಶೇ;78.03;80.56;75.35;80.41

ವಿಜ್ಞಾನ;10,621;10,220;4,273;6,348

ಪಾಸು;9,146;8,962;3,703;5,443

ಶೇ;86.11;87.69;86.66;85.74

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT