ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ. 1ರಿಂದ ಕೊಬ್ಬರಿ ಖರೀದಿ

ನಾಫೆಡ್ ಕೇಂದ್ರ ತೆರೆಯಲು ಸರ್ಕಾರ ಮೀನಮೇಷ
Published 20 ಜನವರಿ 2024, 21:47 IST
Last Updated 20 ಜನವರಿ 2024, 21:47 IST
ಅಕ್ಷರ ಗಾತ್ರ

ತುಮಕೂರು: ನಾಫೆಡ್ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಜ. 20ರಿಂದ ನಡೆಯಬೇಕಿದ್ದ ನೋಂದಣಿ ಹಾಗೂ ಖರೀದಿಯನ್ನು ಫೆ. 1ಕ್ಕೆ ಮುಂದೂಡಲಾಗಿದೆ.

ಸಹಕಾರ ಇಲಾಖೆ ಶನಿವಾರ ಹೊಸದಾಗಿ ಆದೇಶ ಹೊರಡಿಸಿದ್ದು, ಫೆ. 1ರಿಂದ ಖರೀದಿಸುವುದಾಗಿ ತಿಳಿಸಿದೆ. ಮುಂದೂಡಿಕೆಗೆ ಯಾವುದೇ ಕಾರಣಗಳನ್ನು ನೀಡಿಲ್ಲ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಜಿಲ್ಲೆಯ 21 ಸ್ಥಳಗಳಲ್ಲಿ ನಾಫೆಡ್ ಕೇಂದ್ರಗಳ ಮೂಲಕ ಜ. 20ರಿಂದ ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಖರೀದಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ.

ತಿಪಟೂರು, ತುರುವೇಕೆರೆ ತಾಲ್ಲೂಕಿನಲ್ಲಿ ತಲಾ 6 ಕೇಂದ್ರ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಹುಳಿಯಾರಿನಲ್ಲಿ ತಲಾ 2, ತುಮಕೂರು, ಕುಣಿಗಲ್, ಶಿರಾ ತಾಲ್ಲೂಕಿನಲ್ಲಿ 1 ಸೇರಿ ಒಟ್ಟು 21 ಖರೀದಿ ಕೇಂದ್ರಗಳಲ್ಲಿ ಖರೀದಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT