ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಭೂತಪ್ಪನಹಟ್ಟಿಯಲ್ಲಿ ಬುಧವಾರ ಸಿಡಿಲು ಬಡಿದು ರೈತ ಚಿತ್ತಯ್ಯ ಅವರಿಗೆ ಸೇರಿದ ಮೂರು ಕುರಿಗಳು ಸತ್ತಿವೆ.
ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ.
ಪ್ರಕೃತಿ ವಿಕೋಪದಡಿ ರೈತರಿಗೆ ಪರಿಹಾರ ನೀಡಲು ಅವಕಾಶ ಇರುವುದರಿಂದ ನಿಯಮಾನಸಾರ ಕ್ರಮ ಕೈಗೊಂಡು, ಪಶು ವೈದ್ಯಾಧಿಕಾರಿಗಳ ವರದಿಯ ನಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಪ್ರಕೃತಿ ವಿಕೋಪ ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.