ಶನಿವಾರ, ಸೆಪ್ಟೆಂಬರ್ 18, 2021
30 °C

ಬಾಡಿಗೆ ಬಾಕಿ: ಮಳಿಗೆಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಪಟ್ಟಣ ಪಂಚಾಯಿತಿಗೆ ಸೇರಿದ ಐಡಿಎಸ್‌ಎಂಟಿ ಮಳಿಗೆಗಳ ಬಾಡಿಗೆದಾರರು ಅನೇಕ ವರ್ಷಗಳಿಂದ ಬಾಡಿಗೆ ಕಟ್ಟದ ಕಾರಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಪೊಲೀಸ್ ರಕ್ಷಣೆಯೊಂದಿಗೆ ಮಳಿಗೆಗಳನ್ನು ಜಪ್ತಿ ಮಾಡಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿ ಖಾಲಿ ಇದ್ದ ಜಾಗದಲ್ಲಿ ಮಳಿಗೆ ಕಟ್ಟಿಸಿ ಬಾಡಿಗೆ ನೀಡಲಾಗಿತ್ತು. ಇವುಗಳಿಂದ ಬರುವ ಬಾಡಿಗೆ ಪಟ್ಟಣ ಪಂಚಾಯಿತಿಯ ಆದಾಯದ ಮುಖ್ಯ ಮೂಲವಾಗಿತ್ತು. ಪ್ರಾರಂಭದ ದಿನಗಳಲ್ಲಿ ವ್ಯಾಪಾರಸ್ಥರು ವ್ಯವಸ್ಥಿತವಾಗಿ ಬಾಡಿಗೆ ನೀಡುತ್ತಿದ್ದರು. ನಂತರದ ದಿನಗಳಲ್ಲಿ ಕೆಲವು ಅಂಗಡಿಯವರು ಬಾಡಿಗೆ ಕಟ್ಟುವುದನ್ನೇ ನಿಲ್ಲಿಸಿದಾಗ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಎಲ್ಲ ಮಳಿಗೆಗಳಿಂದ ಸುಮಾರು ₹60 ಲಕ್ಷಕ್ಕೂ ಹೆಚ್ಚು ಬಾಡಿಗೆ ಬಾಕಿ ಬರಬೇಕಾಗಿದೆ. ಇದರಿಂದ ಪಟ್ಟಣ ಪಂಚಾಯಿತಿಯ ಆದಾಯ ಕಡಿತಗೊಂಡಿದ್ದು, ಪಟ್ಟಣದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿತ್ತು.

ಈ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಎಲ್ಲ ಸದಸ್ಯರ ಒಪ್ಪಿಗೆಯೊಂದಿಗೆ ನಡಾವಳಿ ಮಂಡಿಸಲಾಗಿತ್ತು. ಜೊತೆಗೆ ಶಾಸಕರು ಕೂಡ ಪಟ್ಟಣ ಪಂಚಾಯಿತಿ ಮಳಿಗೆಗಳ ಬಾಕಿ ಇರುವ ಬಾಡಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕು. ಬಾಡಿಗೆ ಕಟ್ಟಡ ಮಳಿಗೆಗಳಿಗೆ ಬೀಗ ಹಾಕುವಂತೆ ತಿಳಿಸಿದ್ದರು.

ಕೆಲ ಮಳಿಗೆಗಳ ಬಾಡಿಗೆದಾರರು ಕಾಲಾವಕಾಶ ನೀಡಿದರೆ ಸ್ವಲ್ಪ ಬಾಡಿಗೆ ಕಟ್ಟುತ್ತೇವೆ ಎಂದು ಗೋಗರೆದರು. ಮತ್ತೆ ಕೆಲವು ಮಳಿಗೆಯವರು ತಕ್ಷಣ ಬಾಕಿಯಿದ್ದ ಹಣ ಕಟ್ಟಿ ಅಂಗಡಿ ಜಪ್ತಿನಿಂದ ತಪ್ಪಿಸಿಕೊಂಡರು.

ಪಟ್ಟಣ ಪಂಚಾಯಿತಿಯಿಂದ ಈ ಮಳಿಗೆಗಳಿಗೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಕೋವಿಡ್‌ ಸಂಕಷ್ಟದಿಂದಾಗಿ ಬಾಕಿ ಹಣವನ್ನು
ತಕ್ಷಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಕಾಲಾವಕಾಶ ನೀಡಿದರೆ ಹಂತ ಹಂತವಾಗಿ ಬಾಡಿಗೆ ಕಟ್ಟುತ್ತೇವೆ ಎನ್ನುತ್ತಾರೆ ವ್ಯಾಪಾರಸ್ಥರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.