ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ: ಟಿ.ಬಿ‌.ಜಯಚಂದ್ರ

ಗಣರಾಜ್ಯೋತ್ಸವದಲ್ಲಿ ಶಾಸಕ ಟಿ.ಬಿ‌.ಜಯಚಂದ್ರ ಭರವಸೆ
Published 26 ಜನವರಿ 2024, 12:46 IST
Last Updated 26 ಜನವರಿ 2024, 12:46 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನೂರಾರು ಜನ ಪ್ರಾಣ ತ್ಯಾಗ ಮಾಡಿದ್ದು, ಅವರ ನೆನಪಿಗಾಗಿ ಭವ್ಯ ಸ್ಮಾರಕ ನಿರ್ಮಿಸಿ ಅದರಲ್ಲಿ ಅವರ ಭಾವಚಿತ್ರ ಇಡಲಾಗುವುದು ಎಂದು ಶಾಸಕ ಟಿ.ಬಿ‌.ಜಯಚಂದ್ರ ಹೇಳಿದರು.

ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.

ಭಾರತೀಯರಿಗೆ ಸಂವಿಧಾನವೇ ಪ್ರಮುಖ ಧರ್ಮ ಗ್ರಂಥ. ಹಸಿವು ಮುಕ್ತ ಭಾರತದ ನಿರ್ಮಾಣ ಮುಖ್ಯ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಒದಗಿಸಬೇಕು ಎಂದರು.

ಕೇವಲ ರಾಮಮಂದಿರ ನಿರ್ಮಾಣ ಮಾಡಿದ ತಕ್ಷಣ ಸಾಧನೆಯಾಗಲಿಲ್ಲ. ರಾಮನ ಆದರ್ಶ ಮೈಗೂಡಿಸಿಕೊಳ್ಳಬೇಕು, ದೇಶದಲ್ಲಿರುವ ಬಡತನ, ನಿರುದ್ಯೋಗ, ಅಪೌಷ್ಟಿಕತೆಯಂತಹ ಸಮಸ್ಯೆ ನಿವಾರಣೆಯಾದರೆ ಮಾತ್ರ ರಾಮರಾಜ್ಯ ಕಟ್ಟುವಿಕೆ ಸಾಧ್ಯ.

ತಹಶೀಲ್ದಾರ್ ಡಾ.ದತ್ತಾತ್ರೇಯ ಜೆ. ಗಾಧಾ ಮಾತನಾಡಿ, ಸುಸಂಸ್ಕೃತ ಸಮಾಜದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯ ಯಶಸ್ಸಿಗೆ ಮಾದರಿ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ರಾಷ್ಟ್ರನಾಯಕರನ್ನು ನೆನೆಯುವುದು ಅತ್ಯವಶ್ಯಕ ಎಂದರು.

ಪೊಲೀಸ್ ಇಲಾಖೆ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ತಹಶೀಲ್ದಾರ್ ಅವರು ಗೌರವ ರಕ್ಷೆ ಸ್ವೀಕರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಹೆಚ್ಚುವರಿ ಎಸ್‌ಪಿ ವಿ.ಮರಿಯಪ್ಪ, ಡಿವೈಎಸ್‌ಪಿ ಬಿ.ಕೆ.ಶೇಖರ್, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷೆ ಪಿ.ಪೂಜಾ, ತಾ.ಪಂ ಇಒ ಅನಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಸಿಪಿಐ ಮಂಜೇಗೌಡ, ರಾಘವೇಂದ್ರ, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಕಂದಾಯ ನಿರೀಕ್ಷಕ ಸುದರ್ಶನ್ ಪಾಲ್ಗೊಂಡಿದ್ದರು.

ಶಿರಾದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು
ಶಿರಾದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು
ಶಿರಾದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು
ಶಿರಾದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT