ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ; ಕುಸಿದ ಜಿಲ್ಲೆ

ಶೇ 62.26ರಷ್ಟು ಫಲಿತಾಂಶ; ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ; ಬಾಲಕಿಯರೇ ಮೇಲುಗೈ
Last Updated 14 ಜುಲೈ 2020, 13:41 IST
ಅಕ್ಷರ ಗಾತ್ರ

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ 62.26ರಷ್ಟು ಫಲಿತಾಂಶ ಪಡೆದಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಯು 23ನೇ ಸ್ಥಾನಕ್ಕೆ ಕುಸಿದಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಕುಸಿತವೇ ಆಗಿದೆ.

2019ರಲ್ಲಿ ಶೇ 65.81ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ರಾಜ್ಯಮಟ್ಟದಲ್ಲಿ 17ನೇ ಸ್ಥಾನ ಪಡೆದಿತ್ತು. ಆ ವರ್ಷ ರಾಜ್ಯದಲ್ಲಿ ಒಂದಿಷ್ಟು ಉತ್ತಮವಾದ ಫಲಿತಾಂಶ ದೊರೆತಿತ್ತು. ಏಕೆಂದರೆ 2018ರಲ್ಲಿ ಜಿಲ್ಲೆಯು 21ನೇ ಸ್ಥಾನದಲ್ಲಿ ಇತ್ತು. ಈಗ 23ನೇ ಸ್ಥಾನಕ್ಕೆ ಕುಸಿದಿದೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 5,806 ವಿದ್ಯಾರ್ಥಿಗಳಲ್ಲಿ 2,274 ಮಂದಿ (ಶೇ 39.17) ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 9,990 ವಿದ್ಯಾರ್ಥಿಗಳಲ್ಲಿ 6,449 ವಿದ್ಯಾರ್ಥಿಗಳು (ಶೇ 64.55) ಮತ್ತು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 7,338 ವಿದ್ಯಾರ್ಥಿಗಳಲ್ಲಿ 5,681 ಮಂದಿ (ಶೇ 77.42) ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ 64.48ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ 55.39ರಷ್ಟು ಫಲಿತಾಂಶ ದೊರೆತಿದೆ.

ಖಾಸಗಿಯಾಗಿ ಪರೀಕ್ಷೆ ಬರೆದಿದ್ದ 581 ವಿದ್ಯಾರ್ಥಿಗಳಲ್ಲಿ 136 ಮಂದಿ ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ 3,390 ವಿದ್ಯಾರ್ಥಿಗಳಲ್ಲಿ 970 ಮಂದಿ ಪಾಸಾಗಿದ್ದಾರೆ.

ಬಾಲಕಿಯರ ಮೇಲುಗೈ: ಜಿಲ್ಲೆಯಲ್ಲಿ 14,690 ಬಾಲಕಿಯರು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, 9,242 ಮಂದಿ ಉತ್ತೀರ್ಣರಾಗಿದ್ದಾರೆ. ಶೇ 63.91ರಷ್ಟು ಫಲಿತಾಂಶ ಪಡೆದಿದ್ದಾರೆ. 12,415 ಬಾಲಕರು ಪರೀಕ್ಷೆ ಬರೆದಿದ್ದು 6,268 ಮಂದಿ ಉತ್ತೀರ್ಣರಾಗಿದ್ದಾರೆ. ಶೇ 50.49 ಫಲಿತಾಂಶ ಪಡೆದಿದ್ದಾರೆ.

ಕುಣಿಗಲ್ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ ಅಲ್ಮಸ್ ಭಾನು ವಿಜ್ಞಾನ ವಿಭಾಗದಲ್ಲಿ ಶೇ 99ರಷ್ಟು ಅಂಕ ಹಾಗೂ ತುಮಕೂರಿನ ವಿದ್ಯಾನಿಧಿ ಕಾಲೇಜಿನ ದೀಪ್ತಿ ವಿಜ್ಞಾನ ವಿಭಾಗದಲ್ಲಿ ಶೇ 98.83, ಇದೇ ಕಾಲೇಜಿನ ಜೆ.ತರುಣ್ ವಾಣಿಜ್ಯ ವಿಭಾಗದಲ್ಲಿ ಶೇ 99ರಷ್ಟು ಅಂಕ ಪಡೆಯುವ ಮೂಲಕ ರಾಜ್ಯ ಮಟ್ಟದ ಟಾಪರ್‌ಗಳಾಗಿ ಹೆಗ್ಗಳಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT