ತುಮಕೂರು: ಅಡುಗೆ ಎಣ್ಣೆ ಮತ್ತಷ್ಟು ದುಬಾರಿಯಾಗಿದ್ದರೆ, ಏರಿಕೆಯತ್ತ ಮುಖ ಮಾಡಿದ್ದ ಬೆಳ್ಳುಳ್ಳಿ ದರ ಕಡಿಮೆಯಾಗಿದೆ. ತರಕಾರಿ, ಸೊಪ್ಪು ಅಲ್ಪ ಇಳಿಕೆ ಕಂಡಿದೆ. ಹಣ್ಣುಗಳ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಕೋಳಿ ಮಾಂಸದ ಹೆಚ್ಚಳವಾಗಿದೆ.

ಇಳಿಕೆಯತ್ತ ಬೆಳ್ಳುಳ್ಳಿ: ಒಮ್ಮೆಲೆ ದುಪ್ಪಟ್ಟಾಗಿದ್ದ ಬೆಳ್ಳುಳ್ಳಿ ದರ ಈ ವಾರ ಒಮ್ಮೆಲೆ ಕೆ.ಜಿಗೆ ₹100ರ ವರೆಗೂ ಇಳಿಕೆಯಾಗಿದೆ. ಈರುಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ತರಕಾರಿ ಬೆಲೆ ಇಳಿಕೆಯತ್ತ ಸಾಗಿದ್ದು, ನುಗ್ಗೆಕಾಯಿ ಮಾತ್ರ ದುಪ್ಪಟ್ಟಾಗಿದೆ. ಕ್ಯಾರೇಟ್, ಬೀಟ್ರೂಟ್, ಬದನೆಕಾಯಿ, ಎಲೆಕೋಸು, ತೊಂಡೆಕಾಯಿ ಅಲ್ಪ ಕಡಿಮೆಯಾಗಿದೆ. ಕ್ಯಾಪ್ಸಿಕಂ ಮಾತ್ರ ಹೆಚ್ಚಳವಾಗಿದ್ದು, ಇತರೆ ತರಕಾರಿಗಳ ದರ ಕಡಿಮೆಯಾದಂತೆ ಕಾಣುತ್ತಿದೆ. ಆದರೆ ಟೊಮೆಟೊ ತುಸು ಏರಿಕೆಯಾಗಿದೆ. ಕಳೆದ ವಾರ ತೀವ್ರವಾಗಿ ಇಳಿಕೆ ಕಂಡಿದ್ದ ಶುಂಠಿ, ಈ ವಾರ ಹಿಂದಿನ ಸ್ಥಿತಿಗೆ ಬಂದು ತಲುಪಿದೆ.

ಸೊಪ್ಪು ಅಗ್ಗ: ವಾರದಿಂದ ವಾರಕ್ಕೆ ಸೊಪ್ಪು ಬೆಲೆ ಇಳಿಕೆಯತ್ತಲೇ ಸಾಗಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಮೆಂತ್ಯ ಸೊಪ್ಪು ಅಲ್ಪ ಏರಿಕೆಯಾಗಿದ್ದು, ಇತರೆ ಸೊಪ್ಪುಗಳು ಕಡಿಮೆಯಾಗಿವೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಕುಸಿದಿದೆ.

ಹಣ್ಣು ಯಥಾಸ್ಥಿತಿ: ಹಣ್ಣುಗಳ ಧಾರಣೆ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಏಲಕ್ಕಿ ಬಾಳೆಹಣ್ಣು ಕೊಂಚ ಕಡಿಮೆಯಾಗಿದ್ದು, ಕರಬೂಜ, ದ್ರಾಕ್ಷಿ ಇಳಿದಿದೆ. ಕಲ್ಲಂಗಡಿ ಹಣ್ಣು ಕೊಂಚ ಹೆಚ್ಚಳವಾಗಿದೆ.

ಅಡುಗೆ ಎಣ್ಣೆ ದುಬಾರಿ: ವಾರದಿಂದ ವಾರಕ್ಕೆ ಅಡುಗೆ ಎಣ್ಣೆ ಮತ್ತಷ್ಟು ದುಬಾರಿಯಾಗುತ್ತಲೇ ಸಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹126–130, ಪಾಮಾಯಿಲ್ ಕೆ.ಜಿ ₹118–120, ಕಡಲೆಕಾಯಿ ಎಣ್ಣೆ ಕೆ.ಜಿ ₹165–170ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ಬಟಾಣಿ ಧಾರಣೆ ಮತ್ತಷ್ಟು ಏರಿಕೆಯಾಗಿದ್ದು, ಕಡಲೆ ಬೇಳೆ ತುಸು ಹೆಚ್ಚಳವಾಗಿದೆ. ತೊಗರಿ ಬೇಳೆ ಕೊಂಚ ಕಡಿಮೆಯಾಗಿದೆ. ಸಕ್ಕರೆ ಏರಿಕೆಯತ್ತ ಮುಖ ಮಾಡಿದೆ. ಉಳಿದಂತೆ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಮಸಾಲೆ ಪದಾರ್ಥ: ಜೀರಿಗೆ ಬೆಲೆ ಮತ್ತೆ ಹೆಚ್ಚಳವಾಗಿದ್ದು, ಲವಂಗ ಅಲ್ಪ ಕಡಿಮೆಯಾಗಿದೆ. ದುಬಾರಿಯಾಗಿದ್ದ ಗಸಗಸೆ ಅಲ್ಪ ಇಳಿಕೆಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–200, ಹುಣಸೆಹಣ್ಣು ₹120–160, ಬೆಲ್ಲ ಕೆ.ಜಿ ₹50–60, ಕಾಳುಮೆಣಸು ಕೆ.ಜಿ ₹720–740, ಜೀರಿಗೆ ಕೆ.ಜಿ ₹320–340, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹800–850, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹2,500–2,600, ಬಾದಾಮಿ ಕೆ.ಜಿ ₹690–720, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಇಳಿಕೆಯತ್ತ ಸಾಗಿದ್ದ ಕೋಳಿ ಮಾಂಸದ ಬೆಲೆ ಈಗ ಏರಿಕೆಯತ್ತ ಮುಖಮಾಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹130ಕ್ಕೆ ಹೆಚ್ಚಳವಾಗಿದೆ.

ಮೀನು ಇಳಿಕೆ: ಮೀನಿನ ಧಾರಣೆ ನಿಯಂತ್ರಣಕ್ಕೆ ಬಂದಿದ್ದು, ಇಳಿಕೆಯತ್ತ ಸಾಗಿದೆ. ಬಂಗುಡೆ ಕೆ.ಜಿ ₹290, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹640, ಬಿಳಿಮಾಂಜಿ ಕೆ.ಜಿ ₹1,060, ಕಪ್ಪುಮಾಂಜಿ ಕೆ.ಜಿ ₹740, ಇಂಡಿಯನ್ ಸಾಲ್ಮನ್ ಕೆ.ಜಿ ₹930, ಸೀಗಡಿ ಕೆ.ಜಿ ₹470–720, ಏಡಿ ಕೆ.ಜಿ 380ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.