ನಗರದ ಚಿಕ್ಕಪೇಟೆಯ ರಿಹಾನ್ ಪಾಷ (19), ಸಂಜಯ್ (20), ಸಾಗರ್ ಅಲಿಯಾಸ್ ಮಲ್ಲ (20), ಕೆ.ಕಿರಣ್‌ಕುಮಾರ್ ಅಲಿಯಾಸ್ ಕುಳ್ಳ (21) ಬಂಧಿತರು. ‘ಕೈಯಲ್ಲಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದು ಓಡಾಡುತ್ತಿದ್ದಾರೆ’ ಎಂಬ ಖಚಿತ ಮಾಹಿತಿ ಮೇರೆಗೆ ಸೈಬರ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ಗಾಂಜಾವನ್ನು ಪರಸ್ಪರ ಹಂಚಿಕೊಂಡು ಮಾರಾಟ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ನಾಲ್ವರನ್ನು ಬಂಧಿಸಿದ್ದಾರೆ.